ಶೇ.50 ನೌಕರರೊಂದಿಗೆ ಗಾರ್ಮೆಂಟ್ಸ್ ಉತ್ಪಾದನಾ ಘಟಕ ತೆರೆಯಲು ಅನುಮತಿಸಿದ ರಾಜ್ಯ ಸರ್ಕಾರ

0
258
Tap to know MORE!

ಬೆಂಗಳೂರು: ರಾಜ್ಯಾದ್ಯಂತ ಗಾರ್ಮೆಂಟ್ಸ್‌ ನಲ್ಲಿ ಶೇ.50ರಷ್ಟು ನೌಕರರು ಕೆಲಸ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ಇದೇ ವೇಳೆ ಆದೇಶದಲ್ಲಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಎಲ್ಲಾ ರೀತಿ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರು ನಗರದಲ್ಲಿರುವ ಗಾರ್ಮೆಂಟ್ಸ್‌ ಶೇ.50ರಷ್ಟು ನೌಕರರು ಕೆಲಸ ಮಾಡಲು ಅವಕಾಶ ನೀಡಲಾಗಿದೆ ಅಂತ ಹೇಳಲಾಗಿದೆ.

ಪ್ರತಿ ಘಟಕದ ಒಟ್ಟು ಸಿಬ್ಬಂದಿಯಲ್ಲಿ ಶೇ. 50 ಸಿಬ್ಬಂದಿ ಬಳಕೆ, ಕರೊನಾ ಮುನ್ನೆಚ್ಚರಿಕೆ ನಡವಳಿಕೆ ಪಾಲನೆ, ಸಿಬ್ಬಂದಿ ಓಡಾಟಕ್ಕೆ ಅಧಿಕೃತ ಪತ್ರ ಇಲ್ಲವೇ ಗುರುತಿನ ಚೀಟಿ ಕಡ್ಡಾಯವೆಂಬ ಷರತ್ತು ವಿಧಿಸಲಾಗಿದೆ. ಸಿದ್ದ ಉಡುಪು ಉದ್ಯಮಗಳು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಜಾರಿ | ಏನಿರುತ್ತೆ, ಏನಿರಲ್ಲ?

ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಕೂಡ ಹೊಂದಿರಬೇಕು ಅಂತ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಹೊಂದಿರ ತಕ್ಕದ್ದು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here