ಶೇ. 87 ಮಂದಿಗೆ ಚೀನಾ ವಸ್ತು ಬೇಕಿಲ್ಲ

0
218
Tap to know MORE!

ನವದೆಹಲಿ: ಲಡಾಖ್ ನಲ್ಲಿನ ಗಡಿ ಸಂಘರ್ಷದ ನಂತರ ದೇಶದಲ್ಲಿ ಚೀನಾ ವಿರೋಧಿ ಕೂಗು ಹೆಚ್ಚುತ್ತಿದೆ. ದೇಶದ ಸುಮಾರು 87 ಶೇ. ಮಂದಿ ಚೀನಾ ವಸ್ತುಗಳಿಗೆ ಛೀಮಾರಿ ಹಾಕುವುದಾಗಿ ಘೋಷಿಸಿದ್ದಾರೆ. ಲೋಕಲ್ ಸರ್ಕಲ್ ನಡೆಸಿದ ಸರ್ವೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಲೋಕಲ್ ಸರ್ಕಲ್ ನ ಸಮೀಕ್ಷೆಯಲ್ಲಿ ಸುಮಾರು 8000 ಮಂದಿ ಭಾಗಿಯಾಗಿದ್ದರು. ಅವರಲ್ಲಿ ಹಲವರು ವಿವೋ, ಒಪ್ಪೋ, ಟಿಕ್ ಟಾಕ್, ವಿಚಾಟ್ , ಒನ್ ಪ್ಲಸ್ ಸೇರಿದಂತೆ ಅನೇಕ ಚೀನಾ ಉತ್ಪನ್ನಗಳನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಚೀನಾ ವಸ್ತುಗಳ ಬದಲಿಗೆ ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಬಳಕೆ ಮಾಡುವುದಾಗಿ ಸುಮಾರು 87 ಶೇ. ಮಂದಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here