ತೋಕೂರು : ರಾಜ್ಯೋತ್ಸವದ ಪ್ರಯುಕ್ತ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ಶ್ರಮದಾನ

0
88

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ®️ತೋಕೂರು, ಹಳೆಯಂಗಡಿ, ಇದರ ಆಶ್ರಯದಲ್ಲಿ ನವೆಂಬರ್ 1 ರಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ಕೆರೆಯ ಸುತ್ತ ಮುತ್ತಲಿನ ವಠಾರದಲ್ಲಿ ಸ್ವಚ್ಛಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ನಡೆಸಲಾಯಿತು.

ಇದನ್ನೂ ಓದಿ: ತೋಕೂರು: ಸ್ಪೋರ್ಟ್ಸ್ ಕ್ಲಬ್‌ನ ಮಹಿಳಾ ಸದಸ್ಯೆಯರಿಂದ ಗದ್ದೆಯಲ್ಲಿ ಫಸಲು ಕಟಾವು

ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಶ್ರೀ ಮೋಹನ್ ದಾಸ್, ಮಾಜಿ ಸದಸ್ಯರು ಶ್ರೀ ನಾರಾಯಣ ಸುವರ್ಣ, ಶ್ರೀ ಸಂತೋಷ್ ಕುಮಾರ್, ಸಂಸ್ಥೆಯ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ. ಕೆ, ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಉಪಾಧ್ಯಕ್ಷರು ಶ್ರೀ ದೀಪಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಕುಲಾಲ್, ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್, ಇನ್ನಿತರ ಪದಾಧಿಕಾರಿಗಳು, ಮಂಡಲದ ಸದಸ್ಯರು ಹಾಗೂ ದೇಗುಲದ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು

LEAVE A REPLY

Please enter your comment!
Please enter your name here