ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ!

0
213
Tap to know MORE!

ಇಂದು ಬೆಳ್ಳಂಬೆಳಗ್ಗೆ ನಡೆದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಸ್ಯಾಂಡಲ್‌‌ವುಡ್‌ ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಅಧಿಕಾರಿಗಳು ಇಂದು ಬೆಳಿಗ್ಗೆ ಇಂದಿರಾ ನಗರದಲ್ಲಿರುವ ಸಂಜನಾ ಫ್ಲಾಟ್‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇದೀಗ ನಟಿಗೆ ಬಂಧನದ ಭೀತಿ ಎದುರಾಗಿದೆ.

 

ಸಂಜನಾ sandalwood drugs

ಈ ಮೊದಲು ನಟಿ ರಾಗಿಣಿ ನಿವಾಸದ ಮೇಲೂ ಇದೇ ರೀತಿ ದಾಳಿ ನಡೆಸಿದ್ದ ಅಧಿಕಾರಿಗಳು ಬಳಿಕ ಅವರನ್ನು ವಿಚಾರಣೆಗೆ ಕರೆಸಿಕೊಂಡು ಬಂಧನಕ್ಕೊಳಪಡಿಸಿದ್ದರು.

ನಟಿ ರಾಗಿಣಿ ಇನ್ನೂ ಐದು ದಿನಗಳ ಕಾಲ ಪೋಲಿಸ್ ಕಸ್ಟಡಿಗೆ

ಈಗಾಗಲೇ ಸಂಜನಾ ಆಪ್ತ ರಾಹುಲ್‌ ಸಿಸಿಬಿ ವಶದಲ್ಲಿದ್ದು, ಆತ ನೀಡಿದ ಮಾಹಿತಿ ಆಧಾರದ ಮೇಲೆಯೇ ಇಂದು ಬೆಳಿಗ್ಗೆ ಸಂಜನಾ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಸಿನಿ ವಿತರಕ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಡ್ರಗ್ಸ್‌ ಪ್ರಕರಣದ ಲ್ಲಿ ಸಂಜನಾ ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರದ ಬಗ್ಗೆ ಸಂಜನಾ ಮತ್ತ ಸಂಬರಗಿ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿತ್ತು.

LEAVE A REPLY

Please enter your comment!
Please enter your name here