ಬಿಹಾರದಲ್ಲಿ ಸರ್ಕಾರ ರಚನೆಯ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆ : ಯಡಿಯೂರಪ್ಪ ಸ್ಪಷ್ಟನೆ

0
78
ಯಡಿಯೂರಪ್ಪ, ಲವ್‌ ಜಿಹಾದ್‌,
ಪ್ರಾತಿನಿಧಿಕ ಚಿತ್ರ
Tap to know MORE!

ಬೆಂಗಳೂರು : ಬಿಹಾರ ಸರ್ಕಾರದ ರಚನೆಯ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಅಥವ ಪುನಾರಚನೆ ವಿಚಾರಕ್ಕೆ ಸ್ಪಷ್ಟನೆ ಸಿಗಲಿದೆ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ, ಇಂದು ದೆಹಲಿಗೆ ಹೊರಟಿದ್ದೆ. ಆದರೆ, ಹೈ ಕಮಾಂಡ್ ಬಿಹಾರ ಸರ್ಕಾರ ರಚನೆಯಲ್ಲಿ ನಿರತವಾಗಿದೆ. ಈ ಹಿನ್ನಲೆ ಅಲ್ಲಿನ ಸರ್ಕಾರ ರಚನೆಯಾದ ಬಳಿಕ ಬನ್ನಿ ಎಂಬುದು ಅವರ ಅಪೇಕ್ಷೆ. ಇದಾದ ಮೇಲೆ ಅವರು ಕರೆ ನೀಡುವುದಾಗಿ ತಿಳಿಸಿದ್ದಾರೆ. ಅವರು ಕರೆದ ಕೂಡಲೇ ನಾನು ಭೇಟಿ ಮಾಡುತ್ತೇನೆ. ಹೈಕಮಾಂಡ್ ನಾಯಕರ ಜತೆ ಚರ್ಚೆ ಬಳಿಕ ಈ ಬಗ್ಗೆ ನಿರ್ಧಾರ ಮಾಡಲಾಗುವುದು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಅಂತಿಮ. ಅವರು ಹೇಳಿದಂತೆ ನಡೆಯಲಾಗುವುದು ಎಂದರು.

ಇದನ್ನೂ ಓದಿ: 2023ರಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ : ನಿಖಿಲ್

ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಮಾಡಲಾಗುವುದು. ಇನ್ನೆರಡು ಮೂರು ದಿನಗಳೊಳಗೆ ಈ ಕುರಿತು ಹೈ ಕಮಾಂಡ್ ಜೊತೆ ಚರ್ಚಿಸುವುದಾಗಿ ತಿಳಿಸಿದ್ದರು. ಸಿಎಂ ಸಂಪುಟ ವಿಸ್ತರಣೆ ಕುರಿತು ಹೇಳಿಕೆ ನೀಡುತ್ತಿದ್ದಂತೆ ಸಚಿವಾಕಾಂಕ್ಷಿಗಳು ಸಭೆ ನಡೆಸುವುದು, ಸಿಎಂ ಭೇಟಿ ನಡೆಸುವ ಕಾರ್ಯಕ್ರಮ ನಡೆದಿತ್ತು.

ಇನ್ನೂ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಶಾಸಕರು ಈಗ ಸಭೆ ಸೇರದೆ ಯಾವಗ ಸೇರುತ್ತಾರೆ ಎಂದು ಸಭೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here