ಮಂಗಳೂರು : ವಿವಿ ಕಾಲೇಜಿನಲ್ಲಿ “ಸಂವಿಧಾನ ದಿನ” ಆಚರಣೆ

0
124
Tap to know MORE!

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಐತಿಹಾಸಿಕ ರವೀಂದ್ರ ಕಲಾಭವನದಲ್ಲಿ ಗುರುವಾರ ʼಸಂವಿಧಾನ ದಿನʼ ವನ್ನು ಆಚರಿಸಲಾಯಿತು. ಉಸ್ತುವಾರಿ ಪ್ರಾಂಶುಪಾಲೆ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಪಂಡಿತ್‌ ಎ ಅವರು ಪ್ರಾಸ್ತಾವಿಕವಾಗ ಮಾತನಾಡಿ, ನವೆಂಬರ್‌ 26, 1949 ರಂದು ಸಂವಿಧಾನ ರಚನಾ ಸಭೆ ಭಾರತದದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡ ನೆನಪಿಗಾಗಿ ಆಚರಿಸಲಾಗುವ ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನದ ಮಹತ್ವ ವಿವರಿಸಿದರು.

ಇದನ್ನೂ ಓದಿ: ವಿವಿ ಕಾಲೇಜು: ಗ್ಯಾಟ್‌- ಬಿ ಪರೀಕ್ಷೆಯಲ್ಲಿ 68ನೇ ರ‍್ಯಾಂಕ್ ಪಡೆದ ಮರಿಯಂ ರಝಾನಾ

ಇದೇ ಸಂದರ್ಭದಲ್ಲಿ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದು ಸಂವಿಧಾನದ ಆಶಯವನ್ನು ಪಾಲಿಸುವ ಪಣತೊಟ್ಟರು.

LEAVE A REPLY

Please enter your comment!
Please enter your name here