ನಮ್ಮ ಸಂಸ್ಕೃತಿಯನ್ನು ನಮಗೇ ಕಲಿಸುತ್ತಿದೆ ಕೊರೋನಾ

0
220
Tap to know MORE!

ಅಂದು ಮುಸ್ಸಂಜೆ ವೇಳೆ ಮೀನ ತನ್ನ ಗೆಳತಿ ದಿವ್ಯಾಳ ಮನೆಗೆ ಹೋಗಲೇಬೇಕಿತ್ತು. ಆದರೇನು ಮಾಡುವುದು? ಎಲ್ಲಿ ನೋಡಿದರೂ ಕೊರೋನಾ…. ಕೊರೋನಾ…..ಮನೆಯಿಂದ ಹೊರಗೆ ಕಾಲಿಡಲು ಭಯ ಎನ್ನುವಂತಹ ಪರಿಸ್ಥಿತಿ. ಆದರೂ ಹೋಗಲೇ ಬೇಕಾದ ಅನಿವಾರ್ಯತೆ. ಮಾಸ್ಕ್ ತಯಾರಿಸಿ ಕೊರೋನ ವಿರುದ್ಧ ಹೋರಾಡುವ ವಾರಿಯರ್ಸ್ ಗೆ ನೀಡಬೇಕೆಂಬ ಯೋಜನೆ ಮೀನಾಳ ಮನದಲ್ಲಿತ್ತು. ಅದಕ್ಕಾಗಿ ಬಟ್ಟೆ,ದಾರ,ಎಲಾಸ್ಟಿಕ್, ಸಂಗ್ರಹಿಸಲಾಗಿತ್ತು. ಅದನ್ನು ದಿವ್ಯಾಳ ಮನೆಗೆ ತಲುಪಿಸುವ ಧಾವಂತದಲ್ಲಿ ಮೀನಾ ಕಾಲು ನಡಿಗೆಯಲ್ಲಿ ಕಳ್ಳ ದಾರಿಯಲ್ಲಿ ನಡೆದು ಹೋಗುತಿರಬೇಕಾದರೆ ದಾರಿಯ ಸುತ್ತ ಮುತ್ತಲಿನ ಮನೆಯಲ್ಲಿ ಭಜನೆಯೊಂದಿಗೆ ತಾಳದ ಸದ್ದು ಕೇಳಿ ಮೀನಾಳ ಮನಸ್ಸು ಮಂದಾರವಾಗತೊಡಗಿತು. ಮೀನ ಹಾಗೆ ಸ್ವಲ್ಪ ಹೊತ್ತು ನಿಂತು ಆಲಿಸಿದಳು. ಅವಳಿಗೆ ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್ ಗ್ರೂಫ್ ನಲ್ಲಿ ಬಂದ ಮನ್ನಣೆಯ ಸಂದೇಶವೊಂದು ಪ್ರತಿಧ್ವನಿಸಿದಂತಾಯಿತು.

ಶ್ರೀ ಕೃಷ್ಣನನ್ನು ಕಂಡು ಕೊರೋನಾ ಬೀಗುತ್ತಾ ಹೇಳಿತಂತೆ –
ನೋಡು ಕೃಷ್ಣ, ಸಣ್ಣ ವೈರಾಣು ನಾನು,ನಿನ್ನ ದೇವಸ್ಥಾನದ ಬಾಗಿಲನ್ನು ಮುಚ್ಚಿಸಿದೆ
ಕೃಷ್ಣ ನಗುತ್ತಾ ಹೇಳುತ್ತಾನೆ ಮೂಢ ವೈರಾಣುವೇ , ನೋಡೀಗ, ಪ್ರತಿ ಮನೆಯನ್ನು ದೇವಸ್ಥಾನ ಮಾಡಿರುವೆ

ಮೀನಾಗೆ ಇದು ಸತ್ಯವೆನಿಸಿತು . ಭಜನೆಯ ಸದ್ದು ಕೇಳದೆ ಎಷ್ಟೋ ದಿನಗಳಾಗಿದ್ದವು.ಈಗ ಎಲ್ಲರೂ ಮನೆಯಲ್ಲೇ ಇದ್ದು ಮನೆಯ ಸಂಸ್ಕೃತಿಯ ಅರಿವಾಗುತ್ತಿದೆ. ಮನಸ್ಸು ಒಂದಾಗ ತೊಡಗಿದೆ. ಮನೆಯೇ ಮಂತ್ರಾಲಯ ಎಂಬಂತಾಗಿದೆ. ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತಿರುವುದನ್ನು ಕಂಡು ಖುಷಿಯಾಗಿ ಮೀನ ಮಧುರವಾದಳು. ಹಾಗೆಯೆ ಆಲಿಸುತ್ತಾ ಕಾಲದೊಂದಿಗೆ ಕಾಣೆಯಾದ ಚೆನ್ನೆಮಣೆ , ಬುಗುರಿ, ಕಲ್ಲಾಟಗಳು ಲಾಕ್ ಡೌನ್ ನಿಂದಾಗಿ ಜನರಿಗೆ ಲೈಕ್ ಆಗ ತೊಡಗಿತಲ್ಲ ಎಂಬ ಹೆಮ್ಮೆ ಮೀನಾಳಿಗೆ , ಮನೆಯಲ್ಲಿಯೇ ಕುಳಿತು ಗಂಡ,ಹೆಂಡತಿ,ಮಕ್ಕಳು ಚೆಸ್,ಕೇರಂ ಆಡುತ್ತಿರುವುದಕ್ಕೊಂದು ಕಾರಣ ಈ ಕೊರೋನಾ ಅಲ್ಲವೇ? ಕೊರೋನಾ ನಮಗೆ ಸಂಸ್ಕೃತಿ ಕಲಿಸುತಿದೆ. ಹೀಗೆಯೇ ನೂರು ಆಲೋಚನೆ ಗಳೊಂದಿಗೆ ಹೆಜ್ಜೆ ಹಾಕುತ್ತಿದ್ದ ಮೀನಾಳಿಗೆ ದಿವ್ಯಾಳ ಮನೆ ಬಂದಾಗಲೇ ಎಚ್ಚರವಾದದ್ದು.

ಮೀನಾಳ ಆಗಮನ ನೋಡಿ ದಿವ್ಯಾಗೆ ಖುಷಿಯಾಯಿತು. ಇಂತಹ ಸಂದರ್ಭದಲ್ಲಿ ನೀನು ಮನೆಗೆ ಬಂದೆಯಲ್ಲ ಎನ್ನುತ್ತಲೇ ಬರಮಾಡಿಕೊಂಡಳು . ಅಷ್ಟರಲ್ಲಿ ದಿವ್ಯಾಳ ಅತ್ತೆ ಮಾತು ತೂರಿಸಿ ಈಗ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ಯಾರಿಗೂ ಪುರುಸೊತ್ತು ಎಲ್ಲಿರುತದೆ? ಈಗ ನಮ್ಮನೇಲಿ ನೋಡಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವೆ. ಎಷ್ಟೋ ದಿನಗಳಾಗಿದ್ದವು ಮಗ ಇದ್ದರೆ ಸೊಸೆ ಇಲ್ಲ, ಸೊಸೆ ಇದ್ದರೆ ಮಗ ಇಲ್ಲ. ಇಬ್ಬರೂ ಕೆಲಸಕ್ಕೆ ಹೋಗುತಾರಲ್ಲ. ಮಕ್ಕಳಿಗಂತೂ ಬಹಳ ಖುಷಿಯಾಗಿದೆ. ಇನ್ನು ಏನೇನೋ ಹೇಳುವವಳಿದ್ದಳು ದಿವ್ಯಾಳ ಅತ್ತೆ. ಅಷ್ಟರಲ್ಲೇ ಮೀನಾ ಮಾತಿನ ನಡುವೆ ನಿಮ್ಮನೇಲೀ ಟಿ. ವೀ. ಏನಾಗಿದೆ,? ಪಾಪು T.V. ಇಲ್ಲ ಎನ್ನುತ್ತಿದ್ದಾನಲ್ಲ ಎಂದು ಪ್ರಶ್ನಿಸಿದಾಗ ದಿವ್ಯಾಳ ಅತ್ತೆ ಹೇಳುತ್ತಾಳೆ, T.V. ಕೆಟ್ಟು ಹೋಗಿದೆ,ಕೆಟ್ಟದ್ದೇ ಒಳ್ಳೆಯದಾಯಿತು. ರಿಪೇರಿ ಮಾಡಲು ಅಂಗಡಿಗಳು ಓಪನ್ ಇಲ್ಲವಲ್ಲ. ಈ ಮಕ್ಕಳು ಬಿಡುತ್ತಿಲ್ಲ. ಅದೇನೋ ಚಾನೆಲ್ ಹಾಕೊಂಡು ನೋಡ್ತಾ ಇರ್ತಾರೆ. ದಿವ್ಯಾಳ ಅತ್ತೆಯ ರಾಗ ಮುಂದುವ ರಿಯುತಿದ್ದಂತೆ…. ಪಾಪು ಬಂದು ಹೇಳುತ್ತಾನೆ ಅಜ್ಜಿಗೆ ಈಗ ಮಹಾಭಾರತ ಶುರುವಾಗಿದೆಯಲ್ಲ….. ಒಳ್ಳೆ ಸಮಯದಲ್ಲಿ T.v. ಹಾಳಾಗಿದೆ. ಒಳ್ಳೆಯದೇ ಆಯಿತು ಎಂದು ಅಜ್ಜಿಗೆ ಸಿಟ್ಟೆರಿಸುತ್ತಾನೆ. ಅಷ್ಟರಲ್ಲಿ ದಿವ್ಯಾ ಕಾಫಿ ತಂದಿಟ್ಟು ಪಾಪುಗೆ ಹೇಳುತ್ತಾಳೆ, ದೊಡ್ಡವರು ಮಾತನಾಡುವಾಗ ಮಕ್ಕಳು ಬಾಯಿ ಹಾಕಬಾರದು ಎಂದು ಕಣ್ಣು ಸನ್ನೆಯಲ್ಲೆ ಗದರಿಸುತ್ತಾಳೆ.

ಪಾಪು ಆಟವಾಡಲು ಅಂಗಳಕ್ಕೆ ಓಡಿದ ಬಳಿಕ ದಿವ್ಯ ಹೇಳುತ್ತಾಳೆ ಈಗ ಮಕ್ಕಳಿಗೆ ಬಹಳ ಖುಷಿಯಾಗಿದೆ, ಮೂರು ಹೊತ್ತು ಆಟವಾಡುತ್ತಾ ಇರುತ್ತಾರೆ. ಹಾಗೆಯೇ ನನ್ಗೂ ಬಾಲ್ಯದ ನೆನಪು ಆಗುತ್ತಿದೆ,ನಾವು ಸಣ್ಣವರಿದ್ದಾಗ,ಕೊಟ್ಟಿಗೆಯಲ್ಲಿ ದನದೊಂದಿಗೆ ಕಳೆದ ದಿನಗಳು, ಬೆರಣಿ ತಟ್ಟಿದ್ದು, ಅದರೊಂದಿಗೆ ಕಾಣಿಸಿಕೊಂಡ ಹುಳಗಳು, ಬೆರಣಿಯನ್ನು ಹಟ್ಟಿಯ ಗೋಡೆಗೆ ತಟ್ಟುವಾಗ ಅಲ್ಲಿ ಜಾರಿ ಬಿದ್ದದ್ದು, ಅಂಗಳ ತುಂಬಾ ಸೆಗಣಿ ಹಾಕಿ ಸಾರಿಸಿದ್ದು, ಸೆಗಣಿ ಸಾಕಾಗದೆ ಬಕೆಟ್ ಹಿಡಿದು ನೆರೆಮನೆ ಗೆ ಹೋದದ್ದು, ರಸ್ತೆ ಯಲ್ಲಿ ಬಿದ್ದ ಸೆಗಣಿಯನ್ನು ಹೆಕ್ಕಿ ತಂದದ್ದು – ಹಳೆಯ ನೆನಪುಗಳ ನ್ನೂ ಬಿಚ್ಚಿಟ್ಟು ಮತ್ತೆ ಮಾತು ಮುಂದುವರೆಸುತ್ತಾಳೇ. …..

ನಂಗಂತೂ ಲಾಕಡೌನ್ ತುಂಬಾ ಬೇಜಾರಾಗಿದೆ. ದಿವ್ಯ ಹೇಳಿದಾಗ ಮೀನಾ ನೇರವಾಗಿ ಉತ್ತರಿಸುತ್ತಾಳೆ, ನೀನು ಮನೆಯಲ್ಲಿ ತುಂಬಾ ಬಿಝಿಯಾಗಿ ಇರು.ಆಗ ಲಾಕ್ ಡೌನ್ ಎಂಬ ಸನ್ನಿವೇಶವೇ ತಿಳಿಯಲ್ಲ,ಅದಕ್ಕೆ ನಾನು ನಿನಗೆ ಕೆಲಸ ಕೊಡಲೆಂದೆ ಏನು ತಂದಿದ್ದೇನೆ ಗೊತ್ತಾ ….. ಇಲ್ಲಿ ನೋಡು ಬಟ್ಟೆ, ದಾರ,ಇಲಾಸ್ತಿಕ್ …. ಎಲ್ಲವೂ ಇದೆ.. ನೀನು ಮಾಸ್ಕ್ ತಯಾರಿಸಿ ಕೊಡು, ಎಂದಾಗ ಸರಿ ತಾನು ತಯಾರಿಸಿ ನಿನಗೆ ಫೋನಾಯಿಸುತ್ತೇನೆ ಎಂದು ದಿವ್ಯಾ ಹೇಳಿದಳು.

ಇವರ ಮಾತಿನ ನಡುವೆ ಅತ್ತೆ ಬಂದು ನಮನೆಲೀ ಈಗ ವೆರೈಟಿ, ವೆರೈಟಿ ತಿಂಡಿಗಳು.. ನನಗಂತೂ ಖುಷಿಯೋ ಖುಷಿ..ಎಂದಾಗ ಮೀನ ನುಡಿದಳು. ತಾನೊಂದು ಅಡುಗೆ ವಾಟ್ಸ್ ಆ್ಯಪ್ ಗ್ರೂಪ್ ಶುರು ಮಾಡಿದ ಕಥೆ ಬಿಚ್ಚುತ್ತಾ, . ತಾನು ಹಳ್ಳಿಯಿಂದ ಬಂದರೂ, ಲಾಕ್ ಡೌನ್ ಸಮಯದಲ್ಲಿ ಅನೇಕ ತಿಂಡಿ ಮಾಡುವುದನ್ನು ಕಲಿತೆ, ಎಷ್ಟೋ ಮಹಿಳೆಯರು ತಾವು ತಯಾರಿಸಿದ ಅಡುಗೆಯನ್ನು ಫೇಸ್ ಬುಕ್, ವಾಟ್ಸ್ ಆ್ಯಪ್ ಸ್ಟೇಟಸ್‌ಗೆ ಹಾಕುವುದನ್ನು ನೋಡಿ ಖುಷಿ ಆಯ್ತ್. ಮೀನಾ ಬರೆ ವೆಜ್ ಐಟಂ ಕಡೆ ಗಮನ ಕೊಟ್ಟೆಯ… ಅಥವಾ ನಿನಗೆ ಮೀನುಯೆಂದ್ರೆ ಇಷ್ಟ ಎಂದು ಗೊತ್ತು ಆದ್ರೆ…. ಕಂಡಿಕೆ ಅಂಜಲು ಮುಟ್ಟುವ ಹಾಗಿಲ್ಲ ಎಂದಾಗ….. ಮೀನಾ ಮಂದಸ್ಮಿತಳಾಗಿ…. ಹೇಳುತ್ತಾಳೆ “ನಾನೇನು ಮಾಡಿದೆ ಗೊತ್ತಾ ದಿವ್ಯ? ಈ ಸಮಯದಲ್ಲಿ, ಲಾಕ್ ಡೌನ್ ಪುಳಿಯೋಗರೆ.. ಸೀಲ್ ಡೌನ್ ಶಾವಿಗೆ, ಕೋವಿಡ್ 19 ಸಾರು, ಕ್ವಾರಂಟೈನ್ ಸಾಂಬಾರ್.. ಮಾಡಿದ್ದೆ… ಮಾಡಿದ್ದು ಎಂದಾಗ ದಿವ್ಯಗೆ ನಗು ತಡೆಯಲಗಲಿಲ್ಲ. …. ಹೀಗೆ ಇಬ್ಬರೂ ಕೆಲ ಹೊತ್ತು ಮಾತನಾಡುತ್ತಿರುವಾಗಲೆ ಮೀನಾಳ ಫೋನ್ ರಿಂಗಾಯಿತು,. ಮನೆಯಿಂದ ಫೋನ್ ಬರುತಿದೆ, ಎನ್ನುತ್ತಲೆ ಮೀನ ಲಗುಬಗೆಯಿಂದ ಮನೆಯತ್ತ ಹೊರಟಳು….

ಮನೆ ಪ್ರವೇಶಿಸುತಿದ್ದಂತೆ ಮನೆಯ ಅಂಗಳದಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದ ಚಪ್ಪಲಿ ಗಮನಿಸುತ್ತಲೇ… ಅವನ್ನು ಚಪ್ಪಲಿ ಸ್ಟಾಂಡಿನಲ್ಲಿ ಜೋಡಿಸುತಿರುವಾಗ ,ಮಗ ಹೇಳುತ್ತಾನೆ, “ಅಮ್ಮ ನೀನು ಹೊರಗೆ ಹೋಗುವಾಗ ಗೇಟ್ ಹಾಕಿ ಹೋಗಿಲ್ಲವ? ದನವೊಂದು ಬಂದು ಹೂವಿನ ಗಿಡ ತಿಂದು ಹೋಗಿದೆ”. ಮೀನಳ ಮುಖ ಬಾಡಿತು.. ನನ್ಗೆ ಗೇಟ್ ಹಾಕಿ ಹೋದ ನೆನಪು ಎಂದಷ್ಟೇ ಹೇಳಿ ಮೌನಕ್ಕೆ ಶರಣಾ ಗೀ…ಚಿಂತಿಸುತ್ತಾ.. ಕೊರೋನಾ ಸಂಸ್ಕೃತಿಯನ್ನು ಕಲಿಸಿಲ್ಲ, ಕಲಿಸುತ್ತಾ ಇದೆ ಅಷ್ಟರಲ್ಲಿ ಆಪ್ತ ಗೆಳತಿ ಲತಾಳ ಫೋನ್ ಕರೆ ಮೀನಾ ಒಂದು ಗಂಟೆಯ ಮೊದಲು ನಾನು ನಿನ್ನ ಮನೆಗೆ ಬಂದೆ, ನಿನಗೆ ಫೋನ್ ಮಾಡಿದಾಗ ನಾಟ್ ರೀಚೆಬಲ್ ಬಂತು. ನೀನು ಹೊಲಿಯಲು ಕೊಟ್ಟ ಮಾಸ್ಕ್ ಕೊಟ್ಟು ಬಂದೆ ಎಂದಾಗ ಮೀನಳ ಮನಸ್ಸು ಚಿಂತೆ ಗೀಡು ಮಾಡಿತು… ಗೇಟ್ ತೆಗೆದು ಹೋದದ್ದು ಈ ಲತಾ ಇರಬೇಕು ಎಂದು….

ಕಥೆ ಬರಹ: ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here