ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ಇದರ ಸಂಪಾದಕ, ಮೈಸೂರಿನ ಕೆ.ವಿ.ಸಂಪತ್ ಕುಮಾರ್ ಇನ್ನಿಲ್ಲ

0
147
Tap to know MORE!

ಮೈಸೂರು: ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಸುಧರ್ಮ’ ಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ (64) ಅವರು ಬುಧವಾರ ತಮ್ಮ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರಿಗೆ ಪತ್ನಿ ಕೆ.ಎಸ್.ಜಯಲಕ್ಷ್ಮಿ ಇದ್ದಾರೆ.

ಮೃತರ ಅಂತ್ಯಕ್ರಿಯೆಯು ಸಂಜೆ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನೆರವೇರಲಿದೆ. ಕಡಿಮೆ ಓದುಗರ ಬಳಗ ಹಾಗೂ ಆರ್ಥಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ ಲೆಕ್ಕಿಸದೆ ‘ಸುಧರ್ಮ’ ಸಂಸ್ಕೃತ ಪತ್ರಿಕೆಯನ್ನು ಇವರು ತಮ್ಮ ಪತ್ನಿ ಜತೆಗೂಡಿ ಹೊರತರುತ್ತಿದ್ದರು. ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಂಪತ್‌ಕುಮಾರ್ ದಂಪತಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ಇವರು ನಿಧನರಾಗಿದ್ದಾರೆ.

ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ನಿಧನ

ಸಂಪತ್‌ಕುಮಾರ್ ಅವರ ತಂದೆ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1945ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ, 1970ರಲ್ಲಿ ಸುಧರ್ಮ ಪತ್ರಿಕೆಯನ್ನು ಹೊರತರಲಾರಂಭಿಸಿದರು.  ಇವರ ನಿಧನದ ನಂತರ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಂಪತ್‌ಕುಮಾರ್ ಪತ್ರಿಕೆಯಲ್ಲಿ  ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು. ಪತ್ರಿಕೆಯ ಆನ್‌ಲೈನ್‌ ಆವೃತ್ತಿಯನ್ನೂ ಇವರು ಹೊರತಂದರು. ಜತೆಗೆ, ಸಂಸ್ಕೃತ ದಿನದರ್ಶಿಯನ್ನೂ ಪ್ರಕಟಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯನ್ನು ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೆ.ವಿ.ಸಂಪತ್ ಕುಮಾರ್- ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಇದರ ಜತೆಗೆ, ಸಿದ್ಧಾರೂಢ ಪ್ರಶಸ್ತಿ, ಶಿವರಾತ್ರಿ ದೇಶಿಕೇಂದ್ರ ಮಾಧ್ಯಮ ಪ್ರಶಸ್ತಿ, ಅಬ್ದುಲ್ ಕಲಾಂ ಪ್ರಶಸ್ತಿಗಳೂ ಇವರಿಗೆ ಲಭಿಸಿವೆ.

LEAVE A REPLY

Please enter your comment!
Please enter your name here