ಸಚಿವ ಡಾ| ಸುಧಾಕರ್ ಹೆಂಡತಿ-ಮಗಳಿಗೆ ಕೊರೋನಾ

0
292
Tap to know MORE!

ಭಾರತದಲ್ಲಿ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬಂದು ಬೆಂಗಳೂರಿನಲ್ಲಿ ಇಷ್ಟು ದಿನಗಳು ಇದ್ದ ನಿಯಂತ್ರಣ ಕೈ ಮೀರಿ ಹೋಗುತ್ತಿದೆ. ವಿಧಾನಸೌಧ, ಮುಖ್ಯಮಂತ್ರಿ ಕಛೇರಿಯೂ ಲಾಕ್ ಮಾಡಲಾಗಿದೆ. ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ|ಸುಧಾಕರ್ ರವರ ಪತ್ನಿ ಮತ್ತು ಮಗಳಿಗೆ ಕೊರೋನಾ ಇರುವುದು ಇಂದು ದೃಢಪಟ್ಟಿದೆ.

ಇದರ ಮಧ್ಯೆ, ಸಚಿವರಿಗೆ ಹಾಗೂ ಅವರ ಇಬ್ಬರು ಪುತ್ರ ವರದಿ ನೆಗೆಟಿವ್ ಬಂದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ವೇಳೆ ಸಚಿವರಲ್ಲಿ ಸೋಂಕು ಕಂಡರೆ, ಅವರ ಪ್ರಯಾಣದ ಮಾಹಿತಿಗಳನ್ನು ಕಲೆ ಹಾಕುವುದೇ ಕಷ್ಟವಾಗಬಹುದು.

ನಿನ್ನೆಯಷ್ಟೇ, ಸಚಿವರ ತಂದೆ ಹಾಗೂ ಅವರ ಮನೆಯ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯಲ್ಲೂ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಇಂದು ಬಂದ ವರದಿಯಲ್ಲಿ ಸಚಿವರ ಪತ್ನಿ ಮತ್ತು ಮಗಳಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಸಚಿವ ಸುಧಾಕರ್ ಮನೆಯ ನಾಲ್ವರು ಸೋಂಕಿಗೆ ತುತ್ತಾಗಿದಂತಿದೆ.

LEAVE A REPLY

Please enter your comment!
Please enter your name here