ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ | ಯಾರಿಗೆ ಯಾವ ಖಾತೆ?

0
237
Tap to know MORE!

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ, ಪ್ರಮಾಣ ವಚನ ಹಾಗೂ ಖಾತೆ ಹಂಚಿಕೆ ಸೂಪರ್ ಫಾಸ್ಟ್ ರೀತಿಯಲ್ಲಿ ನಡೆದಿದೆ. ಇಂದು ಸಂಜೆ ಮೋದಿ ಸಂಪುಟ ಸೇರಲಿರುವ 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿತ್ತು. ಇನ್ನು 6 ಗಂಟೆಗೆ ಪ್ರಮಾಣ ವಚನ ಸ್ವೀಕಾರವೂ ನಡೆದಿತ್ತು. ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆಯೂ ನಡೆದಿದೆ. ವಿಶೇಷ ಅಂದರೆ ಹೊಸದಾಗಿ ರಚಿಸಲಾದ ಸಹಕಾರ ಸಚಿವಾಲಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಗಲಿಗೆ ಬಿದ್ದಿದೆ.

ಕರ್ನಾಟಕದ ನಾಲ್ವರು ಸಚಿವರ ಖಾತೆ(ಮಿನಿಸ್ಟರ್ ಆಫ್ ಸ್ಟೇಟ್) :

 • ರಾಜೀವ್ ಚಂದ್ರಶೇಕರ್:  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು,
  ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವ
 • ಶೋಭಾ ಕರಂದ್ಲಾಜೆ: ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು
 • ಎ ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ
 • ಭಗವಂತ್ ಖೂಬಾ:  ನವೀಕರಿಸಬಹುದಾದ ಇಂಧನ ಸಚಿವಾಲಯದಲ್ಲಿ ರಾಜ್ಯ ಸಚಿವ,ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಲ್ಲಿ ರಾಜ್ಯ ಸಚಿವರು

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಖಾತೆ ಹಂಚಿಕೆ ವಿವರ(ಕ್ಯಾಬಿನೆಟ್ ಮಿನಿಸ್ಟರ್):

 • ನಾರಾಯಣ ತಾಟು ರಾಣೆ:  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವ
 • ಸರ್ಬಾನಂದ್ ಸೋನೋವಾಲ್: ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಹಾಗೂ ಆಯುಷ್ ಸಚಿವ
 • ಡಾ.ವಿರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
 • ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಸಚಿವ
 • ರಾಮಚಂದ್ರ ಪ್ರಸಾದ್ ಸಿಂಗ್: ಉಕ್ಕು ಸಚಿವ
 • ಅಶ್ವಿನಿ ವೈಷ್ಣವ್: ರೈಲ್ವೆ , ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ
 • ಪಶು ಪತಿ ಕುಮಾರ್ ಪರಾಸ್: ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ
 • ಕಿರನ್ ರಿಜಿಜು: ಕಾನೂನು ಮತ್ತು ನ್ಯಾಯ ಸಚಿವ
 • ರಾಜ್ ಕುಮಾರ್ ಸಿಂಗ್: ವಿದ್ಯುತ್ ಸಚಿವ ಹಾಗೂ ನವೀಕರಿಸಬಹುದಾದ ಇಂಧನ ಸಚಿವ
 • ಹರ್ದಿಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವ
 • ಮನ್ಸುಕ್ ಮಾಂಡವಿಯಾ: ಆರೋಗ್ಯ -ಕುಟುಂಬ ಕಲ್ಯಾಣ ಸಚಿವ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ
 • ಭೂಪೇಂದ್ರ ಯಾದವ್: ಪರಿಸರ, ಅರಣ್ಯ- ಹವಾಮಾನ ಬದಲಾವಣೆ  ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ
  ಪರಶೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ
 • ಜಿ ಕಿಶನ್ ರೆಡ್ಡಿ: ಸಂಸ್ಕೃತಿ ಸಚಿವ, ಪ್ರವಾಸೋದ್ಯಮ ಸಚಿವ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ
 • ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ

ಮಿನಿಸ್ಟರ್ ಆಫ್ ಸ್ಟೇಟ್ :

 • ಪಂಕಜ್ ಚೌಧರಿ;  ಹಣಕಾಸು ಸಚಿವಾಲದ ರಾಜ್ಯ ಸಚಿವ
 • ಅನುಪ್ರಿಯಾ ಸಿಂಗ್ ಪಟೇಲ್; ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ
 • ಡಾ. ಸತ್ಯಪಾಲ್ ಸಿಂಗ್ ಬಘೇಲ್; ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ
 • ಭಾನು ಪ್ರತಾಪ್ ಸಿಂಗ್ ವರ್ಮಾ:  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ
 • ದರ್ಶನಾ ವಿಕ್ರಮ ಜರ್ದೋಶ್;  ಜವಳಿ  ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವೆ
 • ಮಿನಾಕ್ಷಿ ಲೇಖಿ; ವಿದೇಶಾಂಗ ಮತ್ತು ಸಂಸ್ಕೃತಿ ಸಚಿವಾಲಯದಲ್ಲಿ ರಾಜ್ಯ ಸಚಿವ
 • ಅನ್ನಪೂರ್ಣ ದೇವಿ; ಶಿಕ್ಷಣ ಸಚಿವಾಲಯದ ರಾಜ್ಯ ಸಚಿವೆ
 • ಕೌಶಾಲ್ ಕಿಶೋರ್; ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ
 • ಅಜಯ್ ಭಟ್;  ರಕ್ಷಣಾ  ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವ
 • ಬಿಎಲ್ ವರ್ಮಾ; ಈಶಾನ್ಯ ಪ್ರದೇಶದ ಅಭಿವೃದ್ಧಿ ಮತ್ತು ಸಹಕಾರ ಸಚಿವಾಲಯದ ರಾಜ್ಯ ಸಚಿವ
 • ಅಜಯ್ ಕುಮಾರ್; ಗೃಹ ಸಚಿವಾಲಯದ ರಾಜ್ಯ ಸಚಿವ
 • ಚವ್ಹಾಣ್ ದೇವುಸಿನ್ಹ; ಸಂವಹನ ಸಚಿವಾಲಯದ ರಾಜ್ಯ ಸಚಿವ
 • ಕಪಿಲ್ ಮೋರೇಶ್ವರ್ ಪಾಟೀಲ್; ಪಂಚಾಯತಿ ರಾಜ್ ಸಚಿವಾಲಯದ ರಾಜ್ಯ ಸಚಿವ
 • ಪ್ರತಿಮಾ ಭೌಮಿಕ್; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ
 • ಡಾ. ಸುಭಾಷ್ ಸರ್ಕಾರ್; ಶಿಕ್ಷಣ ಸಚಿವಾಲಯದ  ರಾಜ್ಯ ಸಚಿವ
 • ಡಾ.ಭಗವತ್ ಕಿಶನ್‌ರಾವ್ ಕರದ್; ಹಣಕಾಸು ಸಚಿವಾಲಯದ ರಾಜ್ಯ ಸಚಿವ
 • ಡಾ.ರಾಜ್‌ಕುಮಾರ್ ರಂಜನ್ ಸಿಂಗ್; ವಿದೇಶಾಂಗ ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ
 • ಡಾ.ಭಾರತಿ ಪ್ರವೀಣ್ ಪವಾರ್; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ
 • ಬಿಶ್ವೇಶ್ವರ ತುಡು; ಬುಡಕಟ್ಟು ವ್ಯವಹಾರ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ
 • ಶಂತನೂ ಠಾಕೂರ್; ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವ
 • ಡಾ. ಮನುಜಪರ ಮಹೇಂದ್ರಬಾಯಿ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಮತ್ತುಆಯುಷ್ ಸಚಿವಾಲಯದ ರಾಜ್ಯ ಸಚಿವ
 • ಜಾನ್ ಬಾರ್ಲ: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ

LEAVE A REPLY

Please enter your comment!
Please enter your name here