ಸಚಿವ ಸಂಪುಟ ವಿಸ್ತರಣೆ: ಸದಾನಂದ ಗೌಡ, ಪೋಖ್ರಿಯಾಲ್ ಸೇರಿದಂತೆ ಹಲವರು ರಾಜೀನಾಮೆ!

0
205
Tap to know MORE!

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಬುಧವಾರ ಸಂಜೆ 6 ಗಂಟೆಗೆ ನಿಗದಿಯಾಗಿದೆ. ಹೀಗಿರುವಾಗ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌ಗೆ ಲಭ್ಯವಾದ ಮಾಹಿತಿ ಅನ್ವಯ ಮೋದಿ ಸಚಿವ ಸಂಪುಟದಲ್ಲಿ ಈಗಿರುವ 7 ರಾಜ್ಯ ಸಚಿವರು ಕ್ಯಾಬಿನೆಟ್ ಸಚಿವರಾಗಿ ಬಡ್ತಿ ಪಡೆಯಲಿದ್ದು, 25 ಹೊಸ ಸದಸ್ಯರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಅನೇಕ ಹಾಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ ಸಚಿವರ ಪಟ್ಟಿ:

* ರಮೇಶ್ ಪೋಖ್ರಿಯಾಲ್
* ಸಂತೋಷ್ ಗಂಗ್ವಾರ್
* ಸದಾನಂದ ಗೌಡ
* ಸಂಜಯ್ ಧೋತ್ರೆ
* ಪ್ರತಾಪ್ ಚಂದ್ರ ಸಾರಂಗಿ
* ದೇಬೋಶ್ರೀ ಚೌಧರಿ
* ಅಶ್ವಿನಿ ಚೌಬೆ
* ರತನ್ ಲಾಲ್ ಕಟಾರಿಯಾ
* ರಾವ್ ಸಾಹೇಬ್ ಧನ್ವೆ ಪಾಟೀಲ್

ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇನ್ನು ಇತ್ತ ತಾವರ್‌ಚಂದ್ ಗೆಹ್ಲೋಟ್‌ ಈಗಾಗಲೇ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡಿರುವ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಪೋಖ್ರಿಯಾಲ್ ಆರೋಗ್ಯ ಸಂಬಂಧಿತ ಕಾರಣಗಳಿಂದಾಗಿ ಸಚಿವ ಸ್ಥಾನ ಬಿಟ್ಟಿದ್ದಾರೆ.

ಸಂಭಾವ್ಯರ ಪಟ್ಟಿ ಹಾಗೂ ಉನ್ನತ ಮೂಲಗಳಿಂದ ಲಭಿಸಿದ ಮಾಹಿತಿ ಅನ್ವಯ ಪಿಎಂ ಮೋದಿ ನೇತೃತ್ವದ ಈ ಕೇಂದ್ರ ಸಚಿವ ಸಂಪುಟ ಅತ್ಯಂತ ಯುವ ಕ್ಯಾಬಿನೆಟ್‌ ಆಗಲಿದೆ. 14 ಸಚಿವರು 50 ವರ್ಷಕ್ಕಿಂತ ಕಿರಿಯರಾಗಿದ್ದಾರೆ.

ನೂತನ ಸಚಿವರು ಹೆಚ್ಚು ವಿದ್ಯಾವಂತರಾಗಿದ್ದಾರೆ. ಕೆಲವರು ಡಾಕ್ಟರೇಟ್ ಪದವಿ ಗಳಿಸಿದ್ದರೆ, ಇನ್ನು ಕೆಲವರು ಎಂಬಿಎ, ಸ್ನಾತಕೋತ್ತರ ಹಾಗೂ ವೃತ್ತಿಪರರಾಗಿದ್ದಾರೆ. ಸಂಪುಟದಲ್ಲಿ 11 ಮಹಿಳೆಯರಿಗೂ ಸ್ಥಾನ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಕ್ಯಾಬಿನೆಟ್‌ನಲ್ಲಿ ಆಡಳಿತಾತ್ಮಕ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ.”

LEAVE A REPLY

Please enter your comment!
Please enter your name here