ಹೊಸ ಸಚಿವ ಸಂಪುಟ: 33 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ | ಶೇ.90 ಸಚಿವರು ಕೋಟ್ಯಾಧಿಪತಿಗಳು!

0
132
Tap to know MORE!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಯ ಸರ್ಕಾರ ರಚನೆ ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವನ್ನು ಪುನರ್ರಚಿಸಲಾಯಿತು. ಈ ವೇಳೆ 44 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿನ 78 ಮಂತ್ರಿಗಳಲ್ಲಿ 33 (42%) ಮಂದಿ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿದ್ದಾರೆ ಎಂದು ಎಡಿಆರ್ ತಿಳಿಸಿದೆ.

ಅದರಲ್ಲಿ, 24 ಮಂತ್ರಿಗಳ (ಶೇ.31) ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ ಗಂಭೀರ ಪ್ರಕರಣಗಳು ಇರುವುದನ್ನು ಸ್ವತಃ ತಾವೇ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೋವಿಡ್ 19: ಕೇರಳದಲ್ಲಿ ಸುಳ್ಳು ಸಾವಿನ ಲೆಕ್ಕಾಚಾರ | ವರದಿಯಲ್ಲಿದೆ ಭಾರೀ ವ್ಯತ್ಯಾಸ

  1. ಸಚಿವ ಸಂಪುಟವನ್ನು ಪುನರ್ರಚಿಸಿದ ಬಳಿಕ ಸಂಪುಟದಲ್ಲಿ ಕ್ರಿಮಿನಲ್ ಪ್ರಕರಣಗಳಿರುವ ಸಚಿವರ ಪ್ರಮಾಣ ಶೇಕಡಾ 3 ರಷ್ಟು ಏರಿಕೆಯಾಗಿದೆ. 2019 ರಲ್ಲಿ ಎಡಿಆರ್ ನಡೆಸಿದ ವಿಶ್ಲೇಷಣೆಯಲ್ಲಿ, ಮೊದಲ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ, 56 ಮಂತ್ರಿಗಳಲ್ಲಿ ಶೇಕಡಾ 39 ರಷ್ಟು ಮಂದಿಯ ವಿರುದ್ದ ಕ್ರಿಮಿನಲ್ ಪ್ರಕರಣಗಳಿದ್ದವು. ಆ ಸಂಪುಟದಲ್ಲಿಯೂ ಶೇಕಡಾ 91 ರಷ್ಟು ಮಂದಿ ಕೋಟ್ಯಾಧಿಪತಿಗಳಿದ್ದರು ಎಂದು ಎಡಿಆರ್ ತಿಳಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನರೇಂದ್ರ ಮೋದಿ ಸಂಪುಟದ 70 (90%) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಸಚಿವರ ಸರಾಸರಿ ಆಸ್ತಿ 16.24 ಕೋಟಿ ರೂ. ನಾಲ್ವರು ಸಚಿವರು 50 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ. ಅವರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ – 395 ಕೋಟಿ ರೂಪಾಯಿ, ಪಿಯೂಷ್ ಗೋಯಲ್ – 95 ಕೋಟಿ ರೂಪಾಯಿ, ನಾರಾಯಣ್ ರಾಣೆ – 87 ಕೋಟಿ ರೂಪಾಯಿ ಮತ್ತು ರಾಜೀವ್ ಚಂದ್ರಶೇಖರ್ – 64 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಹೊಸ ಕ್ಯಾಬಿನೆಟ್‌ ಮಂತ್ರಿಗಳಲ್ಲಿ 21 ಜನ ಸ್ನಾತಕೋತ್ತರ ಪದವೀಧರರಾಗಿದ್ದಾರೆ. 9 ಮಂತ್ರಿಗಳು ಡಾಕ್ಟರೇಟ್ ಪಡೆದಿದ್ದರೇ, ತಲಾ 17 ಮಂದಿ ಪದವೀಧರರು ಮತ್ತು ವೃತ್ತಿಪರ ಪದವೀಧರರಾಗಿದ್ದಾರೆ. ಇನ್ನು 7 ಮಂದಿ ತಮ್ಮ ಹನ್ನೆರಡನೇ ತರಗತಿ, 3 ಸಚಿವರು ತಮ್ಮ ಹತ್ತನೇ ತರಗತಿ ಮತ್ತು ಇಬ್ಬರು ಸಚಿವರು ತಮ್ಮ ಎಂಟನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here