ಸತತ 14ನೇ ದಿನವೂ ತೈಲ ಬೆಲೆ ಏರಿಕೆ

0
178
Tap to know MORE!

ನವದೆಹಲಿ: ಸತತ 14ನೆ ದಿನವೂ ತೈಲ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಶನಿವಾರ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 53 ಪೈಸೆ ಹಾಗೂ ಡೀಸೆಲ್ ದರ ಲೀ. ಗೆ 58 ಪೈಸೆ ಏರಿಕೆಯಾಗಿದೆ. ಈ ಮೂಲಕ ಪೆಟ್ರೋಲ್ ಬೆಲೆ ಲೀ. ಗೆ 81.44ರೂ ಮತ್ತು ಡೀಸೆಲ್ ದರ 73.86 ರೂ. ಗೆ ತಲುಪಿದೆ.

ದೆಹಲಿಯಲ್ಲಿ ಶನಿವಾರ ಪೆಟ್ರೋಲ್ ದರ 51 ಪೈಸೆ ಹಾಗೂ ಡಿಸೇಲ್ ದರ 61 ಪೈಸೆ ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here