ಸರಕಾರಿ ಅಧಿಕಾರಿಗಳ ಮನೆಯಲ್ಲಿ 3.5 ಕೆಜಿ ಚಿನ್ನ!

0
92

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು 6 ಸ್ಥಳಗಳಲ್ಲಿ ನಡೆಸಿದ ದಾಳಿ ವೇಳೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳ ಬಳಿ ಬರೋಬ್ಬರಿ ಮೂರೂವರೆ ಕೆ.ಜಿ ಚಿನ್ನ, 15 ಕೆ.ಜಿ ಬೆಳ್ಳಿ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿವೆ.

ಕರ್ನಾಟಕ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಆದೇಶದಲ್ಲಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಉಪ ಕಾರ್ಯದರ್ಶಿ ಎಂ.ಎಸ್‌ ನಿರಂಜನ್‌ ಬಾಬು ಮನೆಯಲ್ಲಿ ಶೋಧ ನಡೆಸಲಾಗಿದ್ದು, ಆರೋಪಿತರ ಬಳಿ ತುಮಕೂರು ಜಿಲ್ಲೆಯ ವಿವಿಧೆಡೆ ಐದು ಮನೆಗಳು, 8 ನಿವೇಶನಗಳು, ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯಲ್ಲಿ 1 ನಿವೇಶನ ಹೊಂದಿದ್ದಾರೆ. ಮನೆಗಳಲ್ಲಿ ಶೋಧದ ವೇಳೆ ಒಂದುವರೆ ಕೆ.ಜಿ ಚಿನ್ನಾಭರಣ, ಮೂರುವರೆ ಕೆ.ಜಿ ಬೆಳ್ಳಿ, 2 ಕಾರು, 1 ದ್ವಿಚಕ್ರ ವಾಹನ ಮತ್ತು 5 ಲಕ್ಷ ನಗದು ಪತ್ತೆಯಾಗಿದೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಮತ್ತು ಠೇವಣಿಗಳ ರೂಪದಲ್ಲಿ20 ಲಕ್ಷ ರೂ. ಇದೆ. 54 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಮೈಸೂರು ಮಹಾನಗರ ಪಾಲಿಕೆ ವಲಯ-6ರ ಅಭಿವೃದ್ಧಿ ಅಧಿಕಾರಿ ಎಚ್‌. ನಾಗರಾಜು ಅವರು ಮೈಸೂರು ನಗರದಲ್ಲಿ 2 ವಾಸದ ಮನೆಗಳನ್ನು ಹೊಂದಿದ್ದಾರೆ. ಮೈಸೂರಿನಲ್ಲೇ 5 ಮಹಡಿಯ ವಾಣಿಜ್ಯ ಸಂಕೀರ್ಣ, ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಒಂದು ಫ್ಲ್ಯಾಟ್‌, ಒಂದು ನಿವೇಶನ, ಮೈಸೂರು ನಗರದಲ್ಲಿ 4 ನಿವೇಶನಗಳು ಹೊಂದಿದ್ದಾರೆ. ಎರಡು ಕೆ.ಜಿ ಚಿನ್ನ, 11.5 ಕೆ.ಜಿ ಬೆಳ್ಳಿ, 2 ಕಾರುಗಳು, 4 ದ್ವಿಚಕ್ರ ವಾಹನಗಳು, 9 ಲಕ್ಷ ರೂ. ನಗದು, 22 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಆರೋಪಿತರ ಇತರ ಬ್ಯಾಂಕ್ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

LEAVE A REPLY

Please enter your comment!
Please enter your name here