ಸರ್ಕಾರಿ ನೌಕರರಿಗೆ ₹10,000 ಬಡ್ಡಿ ರಹಿತ ಮುಂಗಡ

0
130
Tap to know MORE!

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಆರ್ಥಿಕ ವಿಷಯಗಳ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.  ಜಿಎಸ್ ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಹಣಕಾಸು ಸಚಿವರ ಪತ್ರಿಕಾಗೋಷ್ಠಿ ನಡೆದಿದೆ.

ಇದೇ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರಿ ನೌಕರರಿಗೆ ₹10,000 ಬಡ್ಡಿ ರಹಿತ ಮುಂಗಡ ನೀಡಲು ಮುಂದಾಗಲಿದೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡಿ, ಉದ್ಯೋಗಿಗಳು ಮುಂಗಡ ಮೌಲ್ಯದ ಪೂರ್ವ-ಲೋಡೆಡ್ ರುಪೇ ಕಾರ್ಡ್ ಅನ್ನು ಪಡೆಯುತ್ತಾರೆ ಹಾಗೂ ಈ ನಿಟ್ಟಿನಲ್ಲಿ ಸರಕಾರ ವು ಬ್ಯಾಂಕ್ ಕ್ರ್ಯೂಸ್ ಗಳನ್ನು ಭರಿಸಲಿದೆ ಎಂದು ತಿಳಿಸಿದರು. ಮಾತನಾಡುತ್ತ ಕೋವಿಡ್-19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಬಡವರು ಮತ್ತು ದುರ್ಬಲ ವರ್ಗಗಳ ಅಗತ್ಯಗಳನ್ನು ‘ಅತ್ಮ ನಿರ್ಭರ್ ಭಾರತ್’ ಪ್ಯಾಕೇಜ್ ನಲ್ಲಿ ನೀಡಲಾಗಿದೆ. ಪೂರೈಕೆ ಯ ನಿರ್ಬಂಧಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡರೂ, ಗ್ರಾಹಕರ ಬೇಡಿಕೆಇನ್ನೂ ಉತ್ತೇಜನ ನೀಡಬೇಕಾಗಿದೆ ಅಂತ ಅವರು ಹೇಳಿದರು.

LEAVE A REPLY

Please enter your comment!
Please enter your name here