ಸಸಿಹಿತ್ಲು: ಮುಂಡ ಬೀಚ್‌ನಂತಹ ಸುಂದರ ತಾಣ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ವಿಫಲ: ಮಾಜಿ ಸಚಿವ ಜೈನ್

0
167
Tap to know MORE!

ಸಸಿಹಿತ್ಲು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ವಿವಿಧ ಇಲಾಖೆಗಳ ಮೂಲಕ ಸುಮಾರು 7 ಕೋ.ರೂ. ವೆಚ್ಚದಲ್ಲಿ ಸಸಿಹಿತ್ಲುವಿನ ಮುಂಡ ಬೀಚ್‌ನ್ನು ರೂಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಪ್ರಸಿದ್ಧಿಗೆ ಬಂದಿತ್ತು. ಇಂತಹ ಸುಂದರ ತಾಣವನ್ನು ಉಳಿಸಿಕೊಳ್ಳುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದರಿಂದಲೇ ಇಂದು ಬೀಚ್ ಕಡಲಿಗೆ ಸೇರಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಸಸಿಹಿತ್ಲುವಿನ ಮುಂಡ ಬೀಚ್‌ಗೆ ಶನಿವಾರ ಸಂಜೆ ಭೇಟಿ ನೀಡಿದ ಅವರು ಸ್ಥಳದಿಂದ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಬೇಕು, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.

ಲಾಕ್‌ಡೌನ್ ಮಧ್ಯೆಯೇ ಹಸೆಮಣೆ ಏರಿದ ಜನಪ್ರಿಯ ‘ಲಕ್ಷ್ಮೀ ಬಾರಮ್ಮ’ ಜೋಡಿ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೆಪಿಸಿಸಿ ವಕ್ತಾರ ಎಚ್.ವಸಂತ ಬೆರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಹಳೆಯಂಗಡಿ ಪಂ. ಸದಸ್ಯರಾದ ಧನಜ್‌ರಾಜ್ ಕೋಟ್ಯಾನ್, ಚಂದ್ರಕುಮಾರ್, ಅನಿಲ್ ಪೂಜಾರಿ, ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here