ಮಾನಸಿಕ ಆರೋಗ್ಯದ ಸಮಾಲೋಚನೆಗೆ 24X7 ಸಹಾಯವಾಣಿಗೆ ಚಾಲನೆ ನೀಡಿದ ಕೇಂದ್ರ ಸರ್ಕಾರ

0
205
Tap to know MORE!

ಜನರಿಗೆ ಮಾನಸಿಕ ಬೆಂಬಲವನ್ನು ಒದಗಿಸಲು ಕೇಂದ್ರವು ಸೋಮವಾರ 24×7 ಟೋಲ್ ಫ್ರೀ ಮಾನಸಿಕ ಪುನರ್ವಸತಿ ಸಹಾಯವಾಣಿಯನ್ನು ಪ್ರಾರಂಭಿಸಿದೆ. ‘ಕಿರಣ್’ (1800-599-0019) ಸಹಾಯವಾಣಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಪ್ರಾರಂಭಿಸಿದರು.

ಆರಂಭಿಕ ತಪಾಸಣೆ, ಪ್ರಥಮ ಚಿಕಿತ್ಸೆ, ಮಾನಸಿಕ ಬೆಂಬಲ, ಯಾತನೆ ನಿರ್ವಹಣೆ, ಮಾನಸಿಕ ಯೋಗಕ್ಷೇಮ, ಸಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸುವುದು ಮತ್ತು ಮಾನಸಿಕ ಬಿಕ್ಕಟ್ಟು ನಿರ್ವಹಣೆಯ ಉದ್ದೇಶದಿಂದ ಸಹಾಯವಾಣಿ ಮಾನಸಿಕ ಆರೋಗ್ಯ ಪುನರ್ವಸತಿ ಸೇವೆಗಳನ್ನು ನೀಡಲಿದೆ ಎಂದು ಸಚಿವರು ಹೇಳಿದರು.

“ವ್ಯಕ್ತಿಗಳು, ಕುಟುಂಬಗಳು, ಎನ್ ಜಿ ಒ ಗಳು, ಪೋಷಕರ ಸಂಘಗಳು, ವೃತ್ತಿಪರ ಸಂಘಗಳು, ಪುನರ್ವಸತಿ ಸಂಸ್ಥೆಗಳು, ಆಸ್ಪತ್ರೆಗಳು ಅಥವಾ ದೇಶಾದ್ಯಂತ ಬೆಂಬಲ ಅಗತ್ಯವಿರುವ ಯಾರಿಗಾದರೂ 13 ಭಾಷೆಗಳಲ್ಲಿ ಸಲಹೆ, ಸಮಾಲೋಚನೆಯನ್ನು ಒದಗಿಸಲು ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ಮಾನಸಿಕವಾಗಿ ಬಳಲುತ್ತಿರುವವರ ಕುಟುಂಬ ಸದಸ್ಯರಿಗೂ ಈ ಸಹಾಯವಾಣಿ ತುಂಬಾ ಉಪಯುಕ್ತವಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಗೆಹ್ಲೋಟ್ ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಬೋಧ್ ಸೇಠ್ ಅವರು ಸಹಾಯವಾಣಿಯ ಕಾರ್ಯಗಳ ಬಗ್ಗೆ ಪ್ರಸ್ತುತಿಯನ್ನು ನೀಡಿದರು.

“ಈ ಟೋಲ್ ಫ್ರೀ ಸಹಾಯವಾಣಿ ಬಿಎಸ್‌ಎನ್‌ಎಲ್‌ನ ತಾಂತ್ರಿಕ ಸಮನ್ವಯದೊಂದಿಗೆ ದಿನದ 24 ಗಂಟೆಗಳು, ವಾರದ ಏಳು ದಿನಗಳು ಕಾರ್ಯನಿರ್ವಹಿಸಲಿವೆ. 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಶ್ಶಾಸ್ತ್ರಜ್ಞರು ಮತ್ತು 668 ಮನೋವೈದ್ಯರ ಸಹಕಾರ ಇದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here