ಸಾಮಾಜಿಕ ಅಂತರದ ನೀತಿ-ನಿಯಮಗಳು ರಾಜಕಾರಣಿಗಳಿಗೆ ಇಲ್ಲವೇ?

0
213
Tap to know MORE!

ಕರ್ನಾಟಕ ಕಾಂಗ್ರೆಸ್ ಶಾಸಕರೊಬ್ಬರ ಪುತ್ರನ ವಿವಾಹವು ಇಂದು ಬಹಳ ಚರ್ಚೆಗೆ ಗ್ರಾಸವಾಗಿದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಸೇರಿದಂತೆ ಅಂದಾಜು 800 ಜನರು ಪಾಲ್ಗೊಂಡಿದ್ದರು. ಕೊರೋನವೈರಸ್ ಭೀತಿಯಿಂದ ಸಾಮಾಜಿಕ ಅಂತರದ ನೀತಿ ನಿಯಮಗಳು ಜಾರಿಯಲ್ಲಿದ್ದರೂ, ನೆರೆದವರು ಅದನ್ನು ಪಾಲಿಸಲೇ ಇಲ್ಲ.

ಕೆಲವು ವಾರಗಳ ಹಿಂದೆಯಷ್ಟೇ, ಕುಮಾರಸ್ವಾಮಿ ಪುತ್ರನ ವಿವಾಹವೂ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಸರ್ಕಾರ ರೂಪಿಸಿರುವ ನಿಯಮಗಳನ್ನು ಶಾಸಕರು, ಮಂತ್ರಿಗಳೇ ಪಾಲಿಸದಿರುವುದು ದುರ್ದೈವದ ಸಂಗತಿ.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಮತ್ತು ಈಗ ಹೂವಿನ ಹದಗಲಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರ ಪುತ್ರ ಪಿ.ಟಿ ಪರಮೇಶ್ವರ ನಾಯಕ್ ಅವರ ವಿವಾಹದ ಬಹು ವೀಡಿಯೊಗಳು ವೈರಲ್ ಆಗಿದೆ. ಬಳ್ಳಾರಿಯ ಲಕ್ಷ್ಮಿಪುರದಲ್ಲಿ ತೆರೆದ ಮೈದಾನದಲ್ಲಿ ಸ್ಥಾಪಿಸಲಾದ ದೊಡ್ಡ ಬಿಳಿ ಟೆಂಟ್ ಹೊರಗೆ ನೂರಾರು ಜನರನ್ನು ಜಮಾಯಿಸಿರುವುದು ಸರ್ಕಾರವನ್ನು ಪ್ರಶ್ನಿಸುವಂತಿದೆ. ೫೦ ಜನಕ್ಕಿಂತ ಹೆಚ್ಚಿನ ಜನರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮವಿದ್ದರೂ, ಇವರಿಗೆ ಅನುಮತಿ ನೀಡಿದವರು ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಬಳ್ಳಾರಿ ಜಿಲ್ಲಾಧಿಕಾರಿಯವರಿಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲವಂತೆ!

ನವ ದಂಪತಿಯೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು

ಒಂದು ವೀಡಿಯೊದಲ್ಲಿ, ವರದಿಗಾರರ ಗುಂಪೊಂದನ್ನು ಕಾಣುತ್ತದೆ. ಕೆಲವರು ಮಾಸ್ಕ್ ಗಳಿಲ್ಲದೇ, ಮೊಬೈಲ್ ಫೋನ್, ಕ್ಯಾಮೆರಾಗಳನ್ನು ಹಿಡಿದು ಫೋಟೋ ತೆಗೆಯುವ ಭರಾಟೆಯಲ್ಲಿರುವು ಕಾಣ ಸಿಕ್ಕಿತು. ಬಿಳಿ ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಧಾವಿಸಿದರು.

ಮತ್ತೊಂದು ವೀಡಿಯೊ, ಹೊಸದಾಗಿ ಮದುವೆಯಾದ ದಂಪತಿಗಳು, ಸಂಬಂಧಿಕರೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತಿತ್ತು. ಅದರಲ್ಲಿ ಹಲವರು ಮುಖವಾಡಗಳನ್ನು ಧರಿಸದೆ, ಕ್ಯಾಮೆರಾಕ್ಕಾಗಿ ಭುಜದಿಂದ ಭುಜದವರೆಗೆ ತಾಗಿಕೊಂಡು ನಗುತ್ತಾ ನಿಂತಿದ್ದರು.

LEAVE A REPLY

Please enter your comment!
Please enter your name here