ಉ.ಪ್ರ : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ | ಕಾಡಿನಲ್ಲಿ ಶವ ಪತ್ತೆ | ಆರೋಪಿ ಬಂಧನ

0
162
Tap to know MORE!

ಉತ್ತರ ಪ್ರದೇಶದ ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಶ್ವಾಸಕೋಶವನ್ನು ಕಿತ್ತು ತೆಗೆದು ಕೊಲೆ ಮಾಡಲಾಗಿದೆ. ,

ಬಾಲಕಿಯ ಮೇಲೆ ವಾಮಾಚಾರ ಪ್ರಯೋಗ ಮಾಡಿದ ಪರಶುರಾಮ್ ಎಂಬಾತನನ್ನು ಹಾಗೂ ಆತನ ಪತ್ನಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪರಶುರಾಮ ಮೊದಲು ಪೊಲೀಸರನ್ನು ದಾರಿತಪ್ಪಿಸಲು ಮುಂದಾಗಿದ್ದ, ಬಳಿಕ ಪೊಲೀಸರ ತನಿಖೆ ವೇಳೆ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

ಬಾಲಕಿಯನ್ನು ಕೊಂದು ಆಕೆಯ ಶ್ವಾಸಕೋಶವನ್ನು ಹೊರಗೆ ತೆಗೆಯುವುದರಿಂದ ಪರಶುರಾಮನ ಪತ್ನಿಗೆ ಮಕ್ಕಳಾಗುತ್ತದೆ ಎಂದು ಯಾರೋ ಹೇಳಿದ್ದ ಸುಳ್ಳನ್ನು ಸತ್ಯವೆಂದು ನಂಬಿ ಈ ರೀತಿ ಮಾಡಿದ್ದರು. ಅಂಕುಲ್ ಹಾಗೂ ಬೀರನ್ ಅವರ ಬಳಿ ಬಾಲಕಿಯನ್ನು ಅಪಹರಿಸುವಂತೆ ಪರಶುರಾಮ್ ಹೇಳಿದ್ದ, ಆದರೆ ಅಂಕುಲ್ ಮತ್ತು ಬೀರನ್ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು, ಆಕೆಯನ್ನು ಅಪಹರಿಸಿ ಕರೆ ತರುವ ಮುನ್ನ ಆಕೆಯ ಮೇಲೆ ಅತ್ಯಾಚಾರವೆಗಿದ್ದರು.

ಬಾಲಕಿ ಪಟಾಕಿ ತರಲೆಂದು ಅಂಗಡಿಗೆ ಹೊರಟಾಗ ಆರೋಪಿಗಳು ಆಕೆಯನ್ನು ಅಪಹಿಸಿದ್ದರು. ಬಾಲಕಿ ಕಾಣೆಯಾದ ಬಳಿಕ ಮನೆಯ ಹತ್ತಿರದ ಎಲ್ಲಾ ಪ್ರದೇಶಗಳಲ್ಲಿ ಆಕೆಯನ್ನು ಹುಡುಕಿದ್ದಾರೆ. ಆದರೆ ಭಾನುವಾರ ಸಂಜೆ ಕಾಡಿನಲ್ಲಿ ದೇಹ ಪತ್ತೆಯಾಗಿದೆ. ಮರದ ಬಳಿ ಆಕೆಯ ಬಟ್ಟೆ, ಚಪ್ಪಲಿಗಳು ದೊರೆತಿದ್ದವು. ಅತ್ಯಾಚಾರವೆಸಗಿದ ಆರೋಪಿಗಳನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here