ಸಿಇಟಿ ಗೆ ಹೈಕೋರ್ಟ್ ಅಸ್ತು – ನಿಗದಿಯಂತೆ ನಾಳೆಯಿಂದ ಸಿಇಟಿ ಪರೀಕ್ಷೆ !!

0
35

ಬೆಂಗಳೂರು : ಸಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ನಿಗದಿಯಂತೆಯೇ ನಾಳೆ ಮತ್ತು ನಾಡಿದ್ದು (ಜುಲೈ 30 ಹಾಗೂ 31) ಈ ವರ್ಷದ ಸಿಇಟಿ ಪರೀಕ್ಷೆ ನಡೆಯಲಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಎಸ್‌ಎಸ್‌ಎಲ್ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ಕೈಗೊಂಡು ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸರ್ಕಾರ ಮುಂದಾಗಿದೆ. ನಾಳೆ ಬೆಳಗ್ಗೆಯಿಂದಲೇ ಪರೀಕ್ಷೆಗಳು ಆರಂಭವಾಗಲಿವೆ.

ಸೋಂಕು ತಗುಲಿದ್ದ, ಕಂಟೇನ್ ಮೆಂಟ್ ಜೋನ್ ನಲ್ಲಿದ್ದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಿಇಟಿಯಲ್ಲಿ, ಸೋಂಕು ತಗುಲಿದವರಿಗೂ ಒಂದೇ ದಿನ, ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವುದು. ಉನ್ನತ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಸಕಲ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಯಾವುದೇ ಸಹಾಯವಾಣಿ ಸಂಖ್ಯೆ ಇಲ್ಲ ಮತ್ತು ಲಭ್ಯವಿರುವ ಒಂದು ಕೆಲಸ ಮಾಡುತ್ತಿಲ್ಲ ಎಂದು ವಕೀಲರು ಸವಾಲು ಹಾಕಿದ್ದರು. ಆದರೆ, ಪರೀಕ್ಷೆಯ ಹಾಲ್ ಟಿಕೆಟ್‌ಗಳು ಕಂಟೈನ್ಮೆಂಟ್ ವಲಯಗಳಿಂದ ಹೊರಹೋಗಲು ಪಾಸ್‌ಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ರಾಜ್ಯ ಸ್ಪಷ್ಟಪಡಿಸಿದೆ.

ಅಷ್ಟೇ ಅಲ್ಲದೆ, ಯಾವುದೇ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಮಾಹಿತಿ ನೀಡುವಂತೆ ನ್ಯಾಯಾಲಯ ರಾಜ್ಯವನ್ನು ಕೋರಿದೆ.

ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದರಿಂದ ನಾಳೆ ಮತ್ತು ನಾಡಿದ್ದು ನಿಗದಿಯಂತೆಯೇ ಸಿಇಟಿ ಪರೀಕ್ಷೆ ನಡೆಯಲಿದೆ.

LEAVE A REPLY

Please enter your comment!
Please enter your name here