ಸಿಎ ಫೈನಲ್ಸ್: ಮಂಗಳೂರಿನ ರುತ್ ಡಿಸಿಲ್ವಾಗೆ ಪ್ರಥಮ ರ‍್ಯಾಂಕ್

0
977
Tap to know MORE!

ಮಂಗಳೂರು : ಮೊದಲ ಬಾರಿಗೆ ಮಂಗಳೂರಿನವರೋರ್ವರು ರಾಷ್ಟ್ರ ಮಟ್ಟದ ಸಿಎ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ರೂತ್ ಕ್ಲಾರಾ ಡಿಸಿಲ್ವಾ ಕಳೆದ ಜುಲೈನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಒಂದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಸ್ಟಿಟ್ಯೂಟ್ ವತಿಯಿಂದ 2021ರ ಸಾಲಿನ ಸಿಎ ಅಂತಿಮ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರ ಫಲಿತಾಂಶ ಸೆ.13ರಂದು ಬಂದಿದ್ದು, ಮಂಗಳೂರು ಮೂಲದ ರೂತ್ ಕ್ಲಾರಾ ಡಿಸಿಲ್ವಾ ಆಲ್ ಇಂಡಿಯಾ ಲೆವಲಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.

ನಗರದ ಮಲ್ಲಿಕಟ್ಟೆಯ ನಿವಾಸಿಗಳಾಗಿರುವ ರೋಸಿ ಮಾರಿಯಾ ಡಿಸಿಲ್ವಾ ಮತ್ತು ರುಫರ್ಟ್ ಡಿಸಿಲ್ವ ದಂಪತಿಯ ಪುತ್ರಿಯಾಗಿರುವ ರೂತ್ ಕ್ಲಾರಾ, ಬಲ್ಮಠದಲ್ಲಿರುವ ಸಿಎ ವಿವಿಯನ್ ಪಿಂಟೋ ಅಂಡ್ ಕಂಪನಿಯಲ್ಲಿ ಸಿಎ ಅಭ್ಯಾಸ ಪಡೆದಿದ್ದರು. ಇದಕ್ಕೂ ಮುನ್ನ ಬೆಂಗಳೂರಿನ ಅಕಾಡೆಮಿ ಒಂದರಲ್ಲಿ ಒಂದು ವರ್ಷದ ಸಿಎ ತರಬೇತಿ ಪಡೆದಿದ್ದರು. ಮಂಗಳೂರಿನ ಸೈಂಟ್ ಥೆರೆಸಾ ಸ್ಕೂಲ್ ನಲ್ಲಿ ಪ್ರಾಥಮಿಕ ಮತ್ತು ಆಗ್ನೆಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು.

LEAVE A REPLY

Please enter your comment!
Please enter your name here