ಸಿಎ (CA) – ಮೇ ಪರೀಕ್ಷೆ ರದ್ದು ; ನವೆಂಬರ್ ನ ಪರೀಕ್ಷೆಯೊಂದಿಗೆ ವಿಲೀನ

0
186
Tap to know MORE!

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮೇ 2020 ರ ಪರೀಕ್ಷೆಗಳನ್ನು ರದ್ದುಗೊಳಿಸಲು ಮತ್ತು ಅದನ್ನು ನವೆಂಬರ್ 2020 ರ ಪರೀಕ್ಷೆಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ. “ಪಾವತಿಸಿದ ಶುಲ್ಕ ಮತ್ತು ವಿನಾಯಿತಿಗಳು ಸೇರಿದಂತೆ, ವಿದ್ಯಾರ್ಥಿಗಳಿಗೆ ಈಗಾಗಲೇ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ನವೆಂಬರ್ ಪರೀಕ್ಷೆಗೆ ಲಭ್ಯವಿರುತ್ತದೆ” ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

“ಮೇ 2020 ರ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು, ನವೆಂಬರ್ 2020 ರ ಪರೀಕ್ಷೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮ್ಮ ಗುಂಪು ಮತ್ತು ಪರೀಕ್ಷೆಯ ಕೇಂದ್ರವನ್ನು ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು ಚಾಲ್ತಿಯಲ್ಲಿರುವ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಇದೆಲ್ಲವೂ ನವೆಂಬರ್ 1, 2020 ರಿಂದ ಜಾರಿಗೆ ಬರುತ್ತದೆ. ಅದಲ್ಲದೆ, ವಿದ್ಯಾರ್ಥಿಗಳು ನವೆಂಬರ್ 2020 ರ ಪರೀಕ್ಷೆಗಳಲ್ಲಿ ಹಾಜರಾಗಲು ಉದ್ದೇಶಿಸಿರುವ ಗುಂಪುಗಳಿಗೆ, ಹೊಸದಾಗಿ ಆಯ್ಕೆಗಳನ್ನು ಮಾಡಲು ಅವರು ಮುಕ್ತರಾಗಿರುತ್ತಾರೆ ” ಎಂದು ಐಸಿಎಐ ತಿಳಿಸಿದೆ ಇತ್ತೀಚಿನ ಸೂಚನೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳು ಯಾವುದೇ ಪ್ರಶ್ನೆ/ಸಂಶಯಗಳನ್ನು ಹೊಂದಿದ್ದರೆ, ಅವರು may2020exam@icai.in ನಲ್ಲಿ ಅಧಿಕಾರಿಗಳಿಗೆ ನೇರವಾಗಿ ಕೇಳಬಹುದು. ಸಾಮಾನ್ಯವಾಗಿ, ಐಸಿಎಐ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಕೊನೆಯ ಪರೀಕ್ಷೆ ನವೆಂಬರ್ 2019 ರಲ್ಲಿ ನಡೆದಿತ್ತು ಮತ್ತು ಮುಂದಿನ ನವೆಂಬರ್ 2020 ರಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here