ಸಿಬಿಎಸ್ಇ ಪಠ್ಯಕ್ರಮ ಬದಲಾವಣೆಯ ಬಗ್ಗೆ ಕಿಡಿಕಾರಿದ ಸಿದ್ದರಾಮಯ್ಯ

0
146
Tap to know MORE!

ಬೆಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ಕಡಿತಗೊಳ್ಳಲಿರುವ ತರಗತಿಗಳ ಅವಧಿಗೆ ಅನುಗುಣವಾಗಿ ಪಠ್ಯಕ್ರಮದಲ್ಲಿ ಬದಲಾವಣೆ ತರಲು ಕೇಂದ್ರ ಸೂಚಿಸಿತ್ತು. ಅದಕ್ಕಾಗಿ ಸಿಬಿಎಸ್ಇ ಪಠ್ಯಕ್ರಮದಿಂದ ಪೌರತ್ವ, ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ಸಂಯುಕ್ತತತ್ವ ಕುರಿತ ಪಾಠಗಳನ್ನು ಕೈಬಿಟ್ಟಿರುವ ಕೇಂದ್ರ ಸಚಿವಾಲಯದ ಕ್ರಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಶಿಕ್ಷಣವನ್ನು ಕೂಡ ಕೇಸರಿಮಯ ಮಾಡುವ ದುರುದ್ದೇಶವನ್ನು ಬಿಜೆಪಿ ಕೈಬಿಡಬೇಕು ಎಂದು ಹರಿಹಾಯ್ದಿದ್ದಾರೆ.

ಪೌರತ್ವ, ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ಸಂಯುಕ್ತತತ್ವ ಕುರಿತ ಅಂಶಗಳು ಭಾರತೀಯ ಪ್ರಜಾಪ್ರಭುತ್ವದ ಆಧಾರಸ್ತಂಭಗಳಾಗಿವೆ. ಇವುಗಳನ್ನು ಪಠ್ಯಕ್ರಮದಿಂದ ಕೈಬಿಟ್ಟರೆ, ಇವುಗಳ ಬಗ್ಗೆ ಮಕ್ಕಳು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಇದೆಲ್ಲ ಅಂಶಗಳ ತಿಳಿವಳಿಕೆಯಿಂದ ಮಕ್ಕಳು ವಂಚಿತರಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿನ ಮಕ್ಕಳು ಇವುಗಳನ್ನು ತಿಳಿದಿರಬೇಕಾಗಿರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಸಿಬಿಎಸ್ ಇ ಪಠ್ಯಕ್ರಮದಿಂದ ಇವುಗಳನ್ನು ಕೈಬಿಡಲು ಕಾರಣವೇನು ಎಂಬುದಕ್ಕೆ ಬಿಜೆಪಿ ವಿವರಣೆ ನೀಡಬಲ್ಲದೆ..? ಈ ತತ್ವಗಳಲ್ಲಿ ಅದಕ್ಕೆ ನಂಬಿಕೆಯಿಲ್ಲ ಎಂದರ್ಥವಲ್ಲವೇ..? ಶಿಕ್ಷಣವನ್ನು ಕೂಡ ಕೇಸರಿಮಯ ಮಾಡುವ ದುರುದ್ದೇಶವನ್ನು ಬಿಜೆಪಿ ಕೈಬಿಡಬೇಕು ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರೋಧಿಸಿ, ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here