ಸಿಬಿಎಸ್‌ಇ 10ನೇ, 12ನೇ ಪರೀಕ್ಷೆ ರದ್ದು

0
132
Tap to know MORE!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬಾಕಿ ಇರುವ 10 ನೇ ತರಗತಿ, 12 ನೇ ತರಗತಿ ಪರೀಕ್ಷೆ 2020 ರದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮರು ನಿಗದಿಪಡಿಸಿದ ಪರೀಕ್ಷೆಗಳು ಜುಲೈ 1ರಿಂದ 15 ರ ವರೆಗೆ ನಡೆಯಬೇಕಿತ್ತು. ಸಿಬಿಎಸ್‌ಇ ಬೋರ್ಡ್ ಪರೀಕ್ಷೆ 2020 ಕ್ಕೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಕೊರೊನ ವೈರಸ್ ಸಾಂಕ್ರಾಮಿಕ ರೋಗ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ, ಸಿಬಿಎಸ್‌ಇ ಕೆಲವು ವಿಷಯಗಳ ಪರೀಕ್ಷೆಗಳನ್ನು ತಡೆಹಿಡಿಯಬೇಕಾಯಿತು. ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಮಂಡಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬಾಕಿ ಇರುವ ಸಿಬಿಎಸ್‌ಇ ಬೋರ್ಡ್ 10 ಮತ್ತು ಸಿಬಿಎಸ್‌ಇ ಬೋರ್ಡ್ 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

12 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಳೆದ ಮೂರು ಶಾಲಾ ಪರೀಕ್ಷೆಗಳಲ್ಲಿ ಅವರ ಸಾಧನೆಯ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಅಂಕಗಳಲ್ಲಿ ತೃಪ್ತಿ ಇಲ್ಲದಿದ್ದರೆ, ಅವರು ಮುಂದಿನ ದಿನಗಳಲ್ಲಿ ಬೋರ್ಡ್ ಪರೀಕ್ಷೆಗೆ ಹಾಜರಾಗಬಹುದು.

LEAVE A REPLY

Please enter your comment!
Please enter your name here