“ಸುದ್ದಿ ಪತ್ರಿಕೆಗಳ ಪಿಡಿಎಫ್ ಹಾಗೂ ಯಾವುದೇ ಡಿಜಿಟಲ್ ಪ್ರತಿಯನ್ನು ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ!”

0
140
Tap to know MORE!

ನವದೆಹಲಿ: ‘ಸುದ್ದಿ ಪತ್ರಿಕೆಗಳ ಪಿಡಿಎಫ್‌ ಪ್ರತಿಗಳನ್ನು ಅಥವಾ ಡಿಜಿಟಲ್‌ ಆವೃತ್ತಿಯ ಅಂಶಗಳನ್ನು, ಮಾಲೀಕರ ಒಪ್ಪಿಗೆ ಇಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡುವುದು ಕೃತಿಸ್ವಾಮ್ಯ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ವಕೀಲ ಪವನ್‌ ದುಗ್ಗಲ್‌ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ : ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಮಸೂದೆಯ ಕರಡು ಅಂಗೀಕಾರ

ಇಂಥ ಕೃತ್ಯವು ಓದುಗರನ್ನು ತಪ್ಪು ಮಾಹಿತಿ ಅಥವಾ ತಿರುಚಿದ ಮಾಹಿತಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಜತೆಗೆ, ದಿನಪತ್ರಿಕೆಗಳು ಹಾಗೂ ಒಟ್ಟಾರೆ ಪತ್ರಿಕೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಪತ್ರಿಕೆಗಳು ತಮ್ಮ ಸುದ್ದಿಗಳ ಮೂಲಕ ಓದುಗರನ್ನು ಸೆಳೆಯುತ್ತವೆ. ಆದರೆ ಇವೇ ಸುದ್ದಿಗಳು ವಾಟ್ಸ್‌‌ಆ್ಯಪ್‌, ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಮುಕ್ತವಾಗಿ ಲಭ್ಯವಾಗುತ್ತಿದ್ದರೆ ಪತ್ರಿಕೋದ್ಯಮ ವ್ಯವಹಾರದ ಮೇಲೆ ಹಾಗೂ ಪತ್ರಕರ್ತರು, ಸಂಪಾದಕರು, ಛಾಯಾಗ್ರಾಹಕರು, ವಿನ್ಯಾಸಕರು ಮುಂತಾಗಿ ಈ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮೇಲೆ ಪರಿಣಾಮ ಉಂಟಾ ಗುತ್ತದೆ ಎಂದು ಅವರು ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here