ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ | ಆದರೂ ಮತ್ತೊಮ್ಮೆ ಕಾಲೇಜು ಬಂದ್ ಮಾಡುವ ಅಗತ್ಯತೆ : ಸಚಿವ ಡಾ| ಸುಧಾಕರ್

0
152
Tap to know MORE!

ಧಾರವಾಡ: ದಿಲ್ಲಿ ಹಾಗೂ ಅಹ್ಮದಾಬಾದ್‌ನಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಒಂದು ವೇಳೆ ಸೋಂಕು ರಾಜ್ಯದಲ್ಲೂ ಹೆಚ್ಚಳ ಆದರೆ ಮತ್ತೆ ಕಾಲೇಜುಗಳನ್ನು ಬಂದ್‌ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ವಿದ್ಯಾರ್ಥಿಗಳಿಗೆ ತಗುಲುವುದಿಲ್ಲ ಎಂದೇನೂ ಇಲ್ಲ. ಆದರೆ, ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಲಿದೆ. ಈ ವಿಶ್ವಾಸದ ಮೇಲೆ ಕಾಲೇಜು ಆರಂಭಿಸಲಾಗಿದೆ ಎಂದರು. ಮಕ್ಕಳ ಜೀವನ ಹಾಗೂ ಅವರ ಶೈಕ್ಷಣಿಕ ಭವಿಷ್ಯ ರೂಪಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಹೀಗಾಗಿ ಈಗ ಹಂತ ಹಂತವಾಗಿ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಕರ್ನಾಟಕ ಬಂದ್| “ವಿನಾಕಾರಣ ಬಂದ್ ಮಾಡಿದ್ರೆ ಕಠಿಣ ಕ್ರಮ” : ಸಿಎಂ ಯಡಿಯೂರಪ್ಪ

120-130 ವಿದ್ಯಾರ್ಥಿಗಳಿಗೆ ಕೋವಿಡ್‌ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ ಎಂದ ಸಚಿವರು, ಹೀಗಾದಲ್ಲಿ ಮತ್ತೆ ಕಾಲೇಜುಗಳನ್ನು ಬಂದ್‌ ಮಾಡುವುದು ಅನಿವಾರ್ಯ ಆಗಲಿದೆ. ಹೀಗಾಗಿಯೇ ರಾಜ್ಯದಲ್ಲಿ ಇನ್ನೂ ಶಾಲೆಗಳನ್ನು ಆರಂಭಿಸಿಲ್ಲ. ಅಹ್ಮದಾಬಾದ್‌ನಲ್ಲಿ ಶನಿವಾರದಿಂದ ಮತ್ತೆ ಲಾಕ್‌ಡೌನ್‌ ಘೋಷಿಸಲಾಗಿದೆ. ಅದು ಕರ್ನಾಟಕಕ್ಕೂ ಬರಲಿದೆ ಎಂದು ಹೇಳಲಾಗದು. ಆದರೆ ಕರ್ನಾಟಕದಲ್ಲಿ ಕೊರೊನಾ ಹೋಗಿದೆ ಎಂಬ ಭಾವನೆ ಜನರಲ್ಲಿದೆ. ಇದು ಸರಿಯಲ್ಲ. ಲಸಿಕೆ ಬರುವವರೆಗೂ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here