ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ ಬರ್ಬರ ಹತ್ಯೆ

0
258
Tap to know MORE!

ಮಂಗಳೂರು: ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ, ಚಾಲಿಪೋಲಿಲು ಸಿನಿಮಾದಲ್ಲಿ ನಟಿಸಿರುವ ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.

ಸುರೇಂದ್ರ ಬಂಟ್ವಾಳ್ ಬಿಸಿರೋಡ್‌ನಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ವಾಸವಿದ್ದು ಇಂದು ಮಧ್ಯಾಹ್ನ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಸುರೇಂದ್ರ ಬಂಟ್ವಾಳ್ ಜೊತೆಗಿದ್ದವರೇ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ 2018ರ ಜೂನ್21 ರಂದು ಬಂಟ್ವಾಳ ಪೇಟೆ ಬಳಿಯ ಬಡ್ಡಕಟ್ಟೆ ಎಂಬಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬೀದಿ ಕಾಳಗ ನಡೆದಿದ್ದು ಅದರಲ್ಲಿ ಇದೇ ಸುರೇಂದ್ರರವರು ತಲ್ವಾರ್ ಬೀಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಈ ಬಗ್ಗೆ ಅವರ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು .ಆ ಸಂದರ್ಭ ಅವರ ಹೆಸರು ಭೂಗತ ಲೋಕದ ಜೊತೆಗೂ ಕೇಳಿ ಬಂದಿತ್ತು .

ಭೂಗತ ಜಗತ್ತಿನ ಜೊತೆ ಹೆಸರು ಕೇಳಿಬಂದಿತ್ತಾದರೂ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಸುರೇಂದ್ರರನ್ನು ಯಾರು ಯಾವ ಕಾರಣಕ್ಕೆ ಹತ್ಯೆಗೈದರು ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

LEAVE A REPLY

Please enter your comment!
Please enter your name here