BREAKING : “ಡಿಸೆಂಬರ್ ಅಂತ್ಯದವರೆಗೂ ಪಿಯು ಕಾಲೇಜುಗಳು ಬಂದ್ | 8ನೇ ತರಗತಿವರೆಗೆ ಶಾಲಾರಂಭವೇ ಸಂಶಯ!” : ಸಚಿವ ಸುರೇಶ್ ಕುಮಾರ್

0
173

ಬೆಂಗಳೂರು: ಕೋವಿಡ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದವರೆಗೂ ಯಾವುದೇ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳು ಆರಂಭಿಸುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ವರೆಗೆ ಶಾಲೆ ಆರಂಭ ಮಾಡದಿರುವ ಬಗ್ಗೆ ಅಭಿಪ್ರಾಯ ಕೇಳಿಬಂದಿದೆ. ಒಂದರಿಂದ 8ನೇ ತರಗತಿವರೆಗೆ ಈ ವರ್ಷ ಶಾಲೆ ಆರಂಭಿಸುವ ಯೋಚನೆಯೇ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಚಂದನ ವಾಹಿನಿಯಲ್ಲಿ 5,6,7 ನೇ ತರಗತಿ ವಿದ್ಯಾರ್ಥಿಗಳಿಗೆ “ಸಂವೇದ ಇ-ಕ್ಲಾಸ್” ಆರಂಭ

ಪಿಯುಸಿ ಹಾಗೂ ಪ್ರೌಢ ಶಾಲಾ ಆರಂಭಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. 1 ರಿಂದ 8ನೇ ತರಗತಿ ಮಕ್ಕಳಿಗೆ ವಿವಿಧ ಮಾರ್ಗದಲ್ಲಿ ಕಲಿಕೆ ನಡೆಯುತ್ತಿದೆ. ಈ ಮಕ್ಕಳಿಗೆ ಶಾಲಾ ತರಗತಿ ನಡೆಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಇಡೀ ವರ್ಷ ಆ ಮಕ್ಕಳಿಗೆ ಶಾಲಾರಂಭಕ್ಕಿಂತ ಪ್ರೌಢಶಾಲೆ ಹಾಗೂ ಪಿಯು ತರಗತಿ ಆದಷ್ಟು ಬೇಗ ತೆರೆಯಬೇಕಿದೆ. ಡಿಸೆಂಬರ್ ನಲ್ಲಿ ನಿರ್ಧಾರ ಮಾಡಲಿದ್ದೇವೆ ಎಂದರು.

ಕಳೆದ ವರ್ಷ 1 ರಿಂದ 9ರ ವರೆಗೆ ಪರೀಕ್ಷೆ ಮಾಡದೇ ತೇರ್ಗಡೆ ಮಾಡಿದ್ದೇವೆ. ಅದೇ ಮಾದರಿಯನ್ನು ಈ ಬಾರಿಯೂ ಅನುಷ್ಠಾನ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು

LEAVE A REPLY

Please enter your comment!
Please enter your name here