ಸುಳ್ಯ : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ!

0
181
Tap to know MORE!

ಸುಳ್ಯ ಅ.23 : ಹದಿಹರೆಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಬೊಳ್ಳಾಜೆಯ ಗಂಗಾಧರ ನಾಯ್ಕ ಎಂಬವರ ಪುತ್ರಿ ಪ್ರಸನ್ನ(23) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಬೊಳ್ಳಾಜೆಯ ತನ್ನ ಮನೆಯಲ್ಲಿ ರಾತ್ರಿ ವೇಳೆ ಯುವತಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ . ಆಕೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ . ಸದ್ಯ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

LEAVE A REPLY

Please enter your comment!
Please enter your name here