ಸುಳ್ಳು ಅತ್ಯಾಚಾರದ ಆರೋಪ : ಯುವತಿಗೆ ₹15 ಲಕ್ಷ ದಂಡ ವಿಧಿಸಿದ ಹೈಕೋರ್ಟ್!

0
177
Tap to know MORE!

ಚೆನ್ನೈ: ಎದುರಾಳಿಯನ್ನು ಬೆದರಿಸಲು ಯಾ ಬಗ್ಗುಬಡಿಯಲು ಹಲವರು ಸುಳ್ಳು ಕೇಸಿನ ಮೊರೆ ಹೋಗುತ್ತಾರೆ . ಇಂತಹುದೇ ಒಂದು ಪ್ರಕರಣದಲ್ಲಿ ಚೆನ್ನೈ ನ್ಯಾಯಾಲಯ ಸುಳ್ಳು ಕೇಸು ನೀಡಿದ ಕಾಲೇಜು ವಿದ್ಯಾರ್ಥಿನಿಗೆ ಬಿಗ್ ಶಾಕ್ ನೀಡಿದೆ.

ಕಾಲೇಜು ವಿದ್ಯಾರ್ಥಿನಿಯಿಂದ ಅತ್ಯಾಚಾರ ಪ್ರಕರಣಕ್ಕೆ ಒಳಗಾದ ಯುವಕನೊಬ್ಬ ಬಂಧನಕ್ಕೆ ಒಳಗಾಗಿದ್ದ ಮತ್ತು 7 ವರ್ಷಕ್ಕೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದ . ಕೊನೆಗೆ ಯುವತಿ ಅತ್ಯಾಚಾರಕ್ಕೆ ಒಳಗಾಗಿಲ್ಲ ಎನ್ನುವುದು ಡಿಎನ್​ಎ ಪರೀಕ್ಷೆಯಲ್ಲಿ ಖಚಿತವಾದ ಬಳಿಕ ಯುವಕನಿಗೆ ರೇಪ್​ ಕೇಸ್​ನಿಂದ ಮುಕ್ತಿ ಸಿಕ್ಕಿದೆ.

ಇದನ್ನೂ ಓದಿ: ಕರ್ನಾಟಕದಲ್ಲೂ ಆನ್ಲೈನ್ ಗೇಮ್ಸ್‌ ನಿಷೇಧ? – ಈ ಕುರಿತು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದೆ ಆಂಧ್ರಪ್ರದೇಶ!

ತನ್ನ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಸಂತೃಸ್ತ ಯುವಕ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು , ವಿಚಾರಣೆ ನಡೆಸಿದ ನ್ಯಾಯಾಲಯ ಕಾಲೇಜು ವಿದ್ಯಾರ್ಥಿನಿ ಹಾಗೂ ಆಕೆಯ ಪಾಲಕರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಸಂತ್ರಸ್ತ ಯುವಕನಿಗೆ 15 ಲಕ್ಷ ರೂ ಪರಿಹಾರ ನೀಡುವಂತೆ ಯುವತಿಗೆ ಶನಿವಾರ ಆದೇಶಿಸಿಸುವ ಮೂಲಕ ಬಿಗ್ ಶಾಕ್ ನೀಡಿದೆ

ಸಂತ್ರಸ್ತ ಯುವಕನ ಹೆಸರು ಸಂತೋಷ್​. ಸಂತೋಷ್​ ಕುಟುಂಬ ಮತ್ತು ಸುಳ್ಳು ಪ್ರಕರಣ ದಾಖಲಿಸಿದ್ದ ಯುವತಿ ಕುಟುಂಬ ನೆರೆಹೊರೆಯವರು. ಯುವತಿ ತಂದೆ ಓರ್ವ ಪೊಲೀಸ್​ ಇನ್ಸ್​ಪೆಕ್ಟರ್. ಎರಡು ಕುಟುಂಬಗಳು ಚೆನ್ನೈನ ಸೆಕ್ರೆಟರಿಯಟ್ ಕಾಲನಿಯಲ್ಲಿ ವಾಸವಿದ್ದಾರೆ.

ಯುವತಿ ಮತ್ತು ಸಂತೋಷ್ ನಡುವೆ ಮದುವೆ ಒಪ್ಪಂದವು ಸಹ ಆಗಿತ್ತು. ಆದರೆ, ಆಸ್ತಿ ವಿಚಾರವಾಗಿ ಎರಡು ಕುಟುಂಬದ ನಡುವೆ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಅದಾದ ಬಳಿಕವೇ ಯುವತಿ ಕುಟುಂಬ ಸಂತೋಷ್​ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ಸಂತೋಷ್ ಪರ ವಕೀಲ ​ ಎ ಸಿರಾಜುದ್ದೀನ್ ಮಾದ್ಯಮಗಳಿಗೆ ತಿಳಿಸಿದ್ದಾರೆ

ಸುಳ್ಳು ಪ್ರಕರಣದಿಂದ ನನ್ನ ಜೀವನ ಮತ್ತು ವೃತ್ತಿ ಬದುಕು ಹಾಳಾಗಿದೆ. ನನಗೆ ಪರಿಹಾರ ಕೊಡಿಸಿ ಎಂದು ಸಂತೋಷ್​ 30 ಲಕ್ಷ ರೂ. ಪರಿಹಾರಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದ. ಯುವಕನ ಮನವಿಯನ್ನು ಪುರಷ್ಕರಿಸಿದ ಕೋರ್ಟ್​ 15 ಲಕ್ಷ ರೂ. ಪರಿಹಾರ ನೀಡುವಂತೆ ಯುವತಿ ಮತ್ತು ಪಾಲಕರಿಗೆ ಆದೇಶಿಸಿದೆ. . ಇದೀಗ ಸುಳ್ಳು ಪ್ರಕರಣ ದಾಖಲಿಸಿದ ಕುಟುಂಬ ಬೆಲೆತೆರಬೇಕಾಗಿದೆ.

LEAVE A REPLY

Please enter your comment!
Please enter your name here