ಬಂಗಾಳ : ಟಿಎಂಸಿ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಸೇರಿದಂತೆ 12 ಶಾಸಕರು, ಓರ್ವ ಸಂಸದ ಬಿಜೆಪಿ ಸೇರ್ಪಡೆ!

0
168
Tap to know MORE!

ಕೋಲ್ಕತ್ತಾ ಡಿ.19: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಭಾವಿ ನಾಯಕರಾಗಿದ್ದ ಸುವೇಂದು ಅಧಿಕಾರಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಿಡ್ನಾಪುರ್​ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ರ್ಯಾಲಿಯಲ್ಲಿ ಅವರು ಭಾಗವಹಿಸಿದ್ದಾರೆ.

ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಗೊಳಿಸುವ, ಹಿರಿಯರು ಮೆಚ್ಚುವಂಥಾ ರಾಜ್ಯ ಕಟ್ಟುವ ಆಶಯವನ್ನು ಸುವೇಂದು ಅಧಿಕಾರಿ ಹೇಳಿದ್ದಾರೆ. ಅಧಿಕಾರಿ ಜೊತೆಗೆ ತಪಸಿ ಮೊಂಡಲ್, ಅಶೋಕೆ ದಿಂಡಾ, ಸುದೀಪ್ ಮುಖರ್ಜಿ, ಸಾಯ್ಕತ್ ಪಂಜಾ, ಶಿಲ್​ಭದ್ರ ದತ್ತಾ, ದೀಪಾಲಿ ಬಿಸ್ವಾಸ್, ಸುಕ್ರ ಮುಂಡ, ಶ್ಯಾಮಾಪ್ದ ಮುಖರ್ಜಿ, ಬಿಸ್ವಜಿತ್ ಕುಂಡು, ಬನಸ್ರಿ ಮೈತಿ ಕೂಡ ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಬೆಂಗಳೂರು : ಡೆತ್‌ನೋಟ್ ಬರೆದಿಟ್ಟು ಪೋಲೀಸ್ ದಂಪತಿ ಆತ್ಮಹತ್ಯೆ..!

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಪಕ್ಷ ಸಂಘಟನೆಯ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆ ಕೊಲ್ಕತ್ತಾದ ರಾಮಕೃಷ್ಣ ಆಶ್ರಮ, ಸ್ವಾಮಿ ವಿವೇಕಾನಂದರ ವಂಶಸ್ಥರ ಮನೆಗೆ ಭೇಟಿ ನೀಡಿದ್ದರು. ಬಳಿಕ ಸಿದ್ಧೇಶ್ವರಿ ಮಹಮಾಯಾ ದೇವಾಲಯಕ್ಕೆ ಹಾಗೂ ಕ್ರಾಂತಿಕಾರ ಹೋರಾಟಗಾರ ಖಾದಿರಾಮ್ ಬೋಸ್ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಲಿದ್ದರು. ಬೆಲಿಜುರಿ ಗ್ರಾಮದ ರೈತರೊಬ್ಬರ ಮನೆಯಲ್ಲಿ ಮಧ್ಯಾಹ್ನ ಭೋಜನ ಸ್ವೀಕರಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬಿಜೆಪಿ ರ್ಯಾಲಿ ಸಂದರ್ಭ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ನಾಯಕರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಅಮಿತ್ ಶಾ ಕೂಡ ಸೂಚನೆ ನೀಡಿದ್ದರು. ಟಿಎಂಸಿ ಹಿರಿಯ ನಾಯಕ ಸುವೇಂದು ಅಧಿಕಾರಿ ಅಮಿತ್ ಶಾ ಜೊತೆ ಮಿಡ್ನಾಪುರ್​ಗೆ ಬರುವ ಸಾಧ್ಯತೆ ಇದೆ ಎಂದು ಈ ಮೊದಲೇ ಹೇಳಲಾಗಿತ್ತು.

ಕೊರೋನಾ ಮುಕ್ತಗೊಂಡ ಶೀಘ್ರದಲ್ಲೇ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ : ಅಮಿತ್ ಶಾ

LEAVE A REPLY

Please enter your comment!
Please enter your name here