ಸೆಲ್ಯೂಟ್ ತಿರಂಗದ ಮುಂಬೈ-ಕರ್ನಾಟಕ ಘಟಕದ ಅಧ್ಯಕ್ಷರಾಗಿ ರಾಮಣ್ಣ ಬಿ ದೇವಾಡಿಗ ಆಯ್ಕೆ

0
162
Tap to know MORE!

ಮುಂಬಯಿ , ಡಿ .7 : ರಾಷ್ಟ್ರೀಯತೆಯ ಮನೋಭಾವ ತುಂಬುವ ,ಸ್ವಾತಂತ್ರ್ಯ ಹೋರಾಟಗಾರರ ಅರಿವು ಮೂಡಿಸುವ ಸರ್ಕಾರೇತರ ರಾಷ್ಟ್ರೀಯ ಸಂಸ್ಥೆ ಸೆಲ್ಯೂಟ್ ತರಂಗದ ಮುಂಬಯಿ – ಕರ್ನಾಟಕ ಘಟಕದ ಅಧ್ಯಕ್ಷರಾಗಿ ಚೆಂಬೂರು ತಿಲಕ ನಗರದ ರಾಮಣ್ಣ ಬಿ . ದೇವಾಡಿಗ ನಿಯುಕ್ತಿಗೊಂಡಿದ್ದಾರೆ .

ಸೆಲ್ಯೂಟ್ ತಿರಂಗದ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಜೇಶ್‌ ರೈ , ಮಹಾರಾಷ್ಟ್ರ ಅಧ್ಯಕ್ಷ ರಾಜೇಶ್ ರೈ , ಕರ್ನಾಟಕ ಮಹಾರಾಷ್ಟ್ರ ಘಟಕದ ಸಂಚಾಲಕ ಹರೀಶ್ ಪೂಜಾರಿ ಅವರ ಶಿಫಾರಸಿನಂತೆ ಈ ಆಯ್ಕೆ ನಡೆದಿದೆ .

ಇದನ್ನೂ ಓದಿ: ಮುಲ್ಕಿ: ತೋಕೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹರಿದಾಸ ಭಟ್ ಆಯ್ಕೆ

ಉದ್ಯಮಿ ರಾಮಣ್ಣ ದೇವಾಡಿಗರು ಬಡತನದಲ್ಲಿ ಬೆಳೆದವರು. ಉದ್ಯಮದ ಲಾಭಾಂಶದಲ್ಲಿ ಹೆಚ್ಚಿನ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸ , ವೈದ್ಯಕೀಯ ನೆರವು ಆರ್ಥಿಕ ದುರ್ಬಲರ ವಿವಾಹಕ್ಕೆ ವಿನಿಯೋಗಿಸಿ ಸಮಾಜ ಸೇವೆಯಲ್ಲಿ ತೃಪ್ತಿ ಹೊಂದಿದ್ದಾರೆ. ಚೆಂಬೂರು ಪೆಸ್ತಮ್ ಸಾಗರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಪ್ರತಿಷ್ಠಿತ ದೇವಾಡಿಗ ಸಂಘ ಮುಂಬಯಿ ಇದರ ಚಂಬರು ವಲಯದ ಮಾಜಿ ಅಧ್ಯಕ್ಷರಾಗಿ ಬಾಂದ್ರಾ ಶ್ರೀ ಧರ್ಮಾಶಾಸ್ತ ಭಕ್ತವೃಂದ ಮಂಡಳ (ರಿ.) ಸಮಿತಿಯ ಅಧ್ಯಕ್ಷರಾಗಿ ಹಳೆಯಂಗಡಿ ತೋಕೂರು ಸುಬ್ರಹ್ಮಣ್ಯ ಜೀರ್ಣೋದ್ದಾರ ಮುಂಬಯಿ ಸಮಿತಿಯ ಕಾರ್ಯದರ್ಶಿಯಾಗಿ , ಶ್ರೀ ಸುಬ್ರಹ್ಮಣ್ಯ , ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಮುಖ್ಯ ಸಲಹೆಗಾರರಾಗಿ ಅಲ್ಲದೆ ವಿವಿಧ ವಿದ್ಯಾ ಸಂಸ್ಥೆಗಳಿಗೆ ಧಾರ್ಮಿಕ ಸೇವಾ ಕೇಂದ್ರಗಳಿಗೆ ಆರ್ಥಿಕ ನೆರವು ನೀಡಿ ಅದರ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here