ಹಳೆಯಂಗಡಿ : ಸ್ಕಿಪ್ಪಿಂಗ್ ಮತ್ತು ಸೈಕಲ್ ಜಾಥಾ ಕಾರ್ಯಕ್ರಮ

0
114
Tap to know MORE!

ಹಳೆಯಂಗಡಿ: ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಆಶ್ರಯದಲ್ಲಿ ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಜಂಟಿ ಸಂಸ್ಥೆಗಳ ಸಹಕಾರದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮತ್ತು ಯುವಕ, ಯುವತಿಯರಿಗೆ ಮಕ್ಕಳ ದಿನಾಚರಣೆಯಂದು “ಸ್ಕಿಪ್ಪಿಂಗ್ ಮತ್ತು ಸೈಕಲ್ ಜಾಥಾ” ಕಾರ್ಯಕ್ರಮವು ಯುವಕ ಮಂಡಲದ ಪ್ರಾಂಗಣದಲ್ಲಿ ಜರಗಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರು, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್ ಕಾಮೆರೊಟ್ಟು, ಹೋಟೆಲ್ ಸಾಯಿಲಿಲಾ ಮತ್ತು ಸಾಯಿ ಬಜಾರ್ ಇದರ ಮಾಲಕರಾದ ಶ್ರೀ ಜಗನ್ನಾಥ ವಿ. ಸಾಲ್ಯಾನ್, ನೆಹರೂ ಯುವ ಕೇಂದ್ರ ಮಂಗಳೂರು ಇದರ ಪ್ರತಿನಿಧಿಗಳಾದ ಶ್ರೀ ಪ್ರೀತೇಶ್ ಸೋನಲಿಕೆ ಮಂಗಳೂರು, ಕುಮಾರಿ ಸುಶ್ಮಿತಾ ಬಿ ಆರ್ ಮೂಡಬಿದ್ರೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಟ್ರಸ್ಟಿನ ಪ್ರಧಾನ ಕಾರ್ಯ ದರ್ಶಿ ಶ್ರೀ ಸ್ಟ್ಯಾನಿ ಡೀ ಕೋಸ್ಟಾ, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here