ತೋಕೂರು ಸೆ.30: ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಹಳೆಯಂಗಡಿ ಇದರ ಆಶ್ರಯದಲ್ಲಿ ಫಿಟ್ ಇಂಡಿಯಾದ ಮೊದಲನೇ ವರ್ಷದ ಭಾಗವಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಮಾಜಿ ಅಧ್ಯಕ್ಷರು ಶ್ರೀ ಮೋಹನ್ ದಾಸ್ ಮಾತನಾಡಿ, ಫಿಟ್ ಇಂಡಿಯಾದ ಚಟುವಟಿಕೆಗಳ ಮೂಲಕ ಕ್ಲಬ್ ನ ಸದಸ್ಯರು ,ಸದಸ್ಯೆಯರು, ಗ್ರಾಮದ ಯುವಕರು, ಹಾಗೂ ಹಿರಿಯ ನಾಗರಿಕರು ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.
ಇದನ್ನೂ ನೋಡಿ: ತೋಕೂರಿನಲ್ಲಿ ಪ್ಲಾಸ್ಟಿಕ್ ಬಳಕೆಯ ಜಾಗೃತಿ ಕಾರ್ಯಕ್ರಮ
ಸೈಕಲ್ ಜಾಥಾದಲ್ಲಿ ನಿಖಿಲ್ ಪದ್ಮಶಾಲಿ, ಸೌರವ್, ಮೊಹಮ್ಮದ್ ಸಯೀದ್, ವಿಷ್ಣು, ಶ್ರವಣ್. ಎಮ್. ಭಂಡಾರಿ, ಸಾತ್ವಿಕ್, ಶ್ರೇಯಸ್ ಎಸ್. ದೇವಾಡಿಗ, ಶ್ರೇಯಸ್ ಸುವರ್ಣ, ರಕ್ಷಣ್. ಜಿ. ಕೆ, ಆರ್ಯನ್ ಎಮ್. ಸುವರ್ಣ, ಚಿರಾಗ್ ಅಂಚನ್, ತರುಣ್ ಕುಲಾಲ್, ಯಜ್ಞೆಶ್ ಕುಲಾಲ್ ಈ ಅಭಿಯಾನದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ. ಕೆ, ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಕಾರ್ಯಾಧ್ಯಕ್ಷರು ಶ್ರೀ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್, ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ದೇವಾಡಿಗ, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡರು.