ಸೋಂಕಿತರ ಸಂಖ್ಯೆಯಲ್ಲಿ 3ನೇ ಸ್ಥಾನ ತಲುಪಿದ ಭಾರತ!

3
219
Tap to know MORE!

ಭಾರತದಲ್ಲಿ ಕೊರೋನಾ ಹಾರಾಟ ಮಿತಿಮೀರಿದ್ದು, ದಿನೇ ದಿನೇ ದಾಖಲೆಯ ಸಂಖ್ಯೆಯ ಜನರು ಕೊರೋನಾ ಸೋಂಕಿಗೆ ಒಳಪಡುತ್ತಿದ್ದಾರೆ. ಇಂದಿನ ಬೆಳವಣಿಗೆಯಲ್ಲಿ ವಿಶ್ವದಲ್ಲಿ ಭಾರತವು ರಷ್ಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದೆ. ರಷ್ಯಾದಲ್ಲಿ 6.8 ಲಕ್ಷ ಸೋಂಕಿತರಿದ್ದರೆ, ಭಾರತದಲ್ಲಿ 6.9 ಲಕ್ಷ ದಾಟಿದೆ. ರಷ್ಯಾದಲ್ಲಿ ಒಂದು ಹಂತದಲ್ಲಿ ಭಾರಿ ವೇಗದಲ್ಲಿ ಸೋಂಕು ಹರಡುತ್ತಿದ್ದರೂ, ಈಗ ಭಾರತಕ್ಕೆ ಹೋಲಿಸಿದರೆ ವೇಗ ಕುಂಠಿತಗೊಂಡಿದೆ. ಭಾರತದಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದ್ದರೆ, ರಷ್ಯಾದಲ್ಲಿ ಇತ್ತೀಚೆಗೆ 6-7 ಸಾವಿರ ಸೋಂಕಿತರ ವರದಿಯಾಗುತ್ತಿದೆ. ಹೀಗಾಗಿ, ಭಾರತವು ರಷ್ಯಾ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬಂದಿರುತ್ತದೆ.

ವಿಶ್ವದ ಟಾಪ್ 5 ಸೋಂಕು ಪೀಡಿತ ರಾಷ್ಟ್ರಗಳು

ಈಗ ಭಾರತಕ್ಕಿಂತ ಮೇಲೆ ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಿವೆ. ಅಮೇರಿಕಾದಲ್ಲಿ 29.4 ಲಕ್ಷ ಸೋಂಕಿತರಿದ್ದರೆ, ಬ್ರೆಜಿಲ್ ದೇಶದಲ್ಲಿ 15.78 ಲಕ್ಷ ಸೋಂಕಿತರ ವರದಿಯಾಗಿದೆ. ಇತ್ತೀಚೆಗೆ, ಅಮೇರಿಕಾದಲ್ಲಿ ದಿನಕ್ಕೆ 40-50 ಸಾವಿರದಷ್ಟು ಮತ್ತು ಬ್ರೆಜಿಲ್ ನಲ್ಲಿ ಪ್ರತಿದಿನ ಸುಮಾರು 30-40 ಸಾವಿರದಷ್ಟು ಸೋಂಕಿತರ ವರದಿಯಾಗುತ್ತಿದೆ

ಭಾರತದಲ್ಲಿ ನಿನ್ನೆ ಒಂದೇ ದಿನ ಇದುವರೆಗಿನ ಗರಿಷ್ಟ 24 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿತ್ತು.

3 COMMENTS

LEAVE A REPLY

Please enter your comment!
Please enter your name here