“ಸೋನಿಯಾ ಗಾಂಧಿಯವರ ಜೀವನಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಿ” : ಎಐಸಿಸಿ ವಕ್ತಾರ

0
160
Tap to know MORE!

ಹೈದರಾಬಾದ್​: ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲೆಯ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದಿಂದ ತೆಲಂಗಾಣದ ಶಾಲೆಯಲ್ಲಿ ಇದನ್ನು ಪಠ್ಯಕ್ರಮದಲ್ಲಿ ಸೇರಿಸುವಂತೆ ಕೋರಲಾಗಿದೆ.

ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಅವರಿಗೆ ಕಾಂಗ್ರೆಸ್​ ಪಕ್ಷದ ವಕ್ತಾರರು ಮನವಿ ಸಲ್ಲಿಸಿದ್ದು, ಪಠ್ಯವಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಾಲಾಡಿ ಸೇತುವೆಗೆ ಕಾರು ಡಿಕ್ಕಿ | ಕೆಎಂಎಫ್ ನಿರ್ದೇಶಕ ಸಾವು!

ನಿನ್ನೆ ಸೋನಿಯಾ ಗಾಂಧಿಯವರು 74ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ ಸೋನಿಯಾ ಗಾಂಧಿಯವರ ಅಪರೂಪದ ಜೀವನ ಚರಿತ್ರೆಯನ್ನು ಮಕ್ಕಳು ಓದುವ ಅಗತ್ಯವಿದೆ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅಮೂಲ್ಯವಾದದ್ದನ್ನು ನೀಡುವ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ ಎಐಸಿಸಿ ವಕ್ತಾರ ಶ್ರವನ್​ ದಾಸೋಜು.

ಸೋನಿಯಾ ಗಾಂಧಿ ಈ ದೇಶಕ್ಕಾಗಿ ಮಾಡಿದ ಸೇವೆ ಹಾಗೂ ಬದ್ಧತೆಯನ್ನ ಗಮನದಲ್ಲಿಟ್ಟುಕ್ಕೊಂಡು ಸೋನಿಯಾ ಗಾಂಧಿಗೆ ಈ ಕೊಡುಗೆ ಮೂಲಕ ಗೌರವಿಸೋದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸೋನಿಯಾ ಬೆಂಬಲವಿಲ್ಲದೇ ತೆಲಂಗಾಣ ಉದಯವಾಗುತ್ತಿರಲಿಲ್ಲ ಎಂದು ಈ ಹಿಂದೆ ಕೆ ಚಂದ್ರಶೇಖರ್​ ರಾವ್​ ಅವರು ಹೇಳಿರುವ ಮಾತನ್ನೇ ಪುನಃ ನೆನಪಿಸಿರುವ ಎಐಸಿಸಿ, ಸೋನಿಯಾಗಾಂಧಿಯವರ ಪಠ್ಯವನ್ನು ಅಳವಡಿಸುವ ಮೂಲಕ ಅವರಿಗೆ ಈ ರೀತಿಯಾಗಿ ಕೊಡುಗೆ ನೀಡಬಹುದು ಎಂದು ಮನವಿ ಮಾಡಿದ್ದಾರೆ.

ತೆಲಂಗಾಣ ರಾಜ್ಯದ ಉದಯದ ಕುರಿತಂತೆ 10ನೇ ವರ್ಗದ ಪಠ್ಯಪುಸ್ತಕದಲ್ಲಿ ರಾವ್​ ಅವರ ಉಪವಾಸದ ಬಗ್ಗೆ ಉಲ್ಲೇಖವಿದ್ದು, ಅದರಲ್ಲಿ ಸೋನಿಯಾಗಾಂಧಿ ಹೆಸರು ಇಲ್ಲ. ಇದು ಸರಿಯಲ್ಲ ಎಂದಿರುವ ಎಐಸಿಸಿ ಈಗ ಅವರ ಜೀವನಚರಿತ್ರೆಯನ್ನು ಮಕ್ಕಳು ಓದಲಿ ಎಂದಿದೆ.

LEAVE A REPLY

Please enter your comment!
Please enter your name here