ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲ : ಸೋನಿಯಾ ಗಾಂಧಿ ವಾಗ್ದಾಳಿ

1
187
ಸೋನಿಯಾ ಗಾಂಧಿ, ಆನ್‌ಲೈನ್‌ ಸಭೆ, ಕಾಂಗ್ರೆಸ್
Tap to know MORE!

ಮುಂದಿನ ತಿಂಗಳು ನಡೆಯಲಿರುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದು, ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲ ಎಂದು ಹೇಳಿದ್ದಾರೆ.

ಕೊರೋನವೈರಸ್ ಭೀತಿಯ ಮಧ್ಯೆ ನಡೆಯಲಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವುದಕ್ಕಾಗಿ, ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆನ್ಲೈನ್ ಸಭೆಯಲ್ಲಿ‌ ಸೋನಿಯಾ ಗಾಂಧಿ ಮಾತನಾಡುತ್ತಿದ್ದರು.‌

ಇದನ್ನೂ ಓದಿ : ನಿಗದಿಯಂತೆ ನಡೆಯಲಿದೆ ಜೆಇಇ-ನೀಟ್‌ ಪರೀಕ್ಷೆ – ಕೇಂದ್ರದ ಸ್ಪಷ್ಟನೆ

ಸಭೆಯಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಪಂಜಾಬ್‌ನ ಅಮರಿಂದರ್ ಸಿಂಗ್, ಜಾರ್ಖಂಡ್‌ನ ಹೇಮಂತ್ ಸೊರೆನ್, ಛತ್ತೀಸ್‌ಗಢದ ಭೂಪೇಶ್ ಬಾಗೇಲ್ ಮತ್ತು ಪುದುಚೇರಿಯ ವಿ ನಾರಾಯಣಸಾಮಿ ಭಾಗವಹಿಸಿದ್ದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಗೆ ಸಂಬಂಧಿಸಿದ ಪ್ರಕಟಣೆಗಳು ಚಿಂತಾಜನಕವಾಗಿದ್ದು, ಇದು ಪ್ರಗತಿಪರ, ಜಾತ್ಯತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆಯಾಗಿದೆ ಎಂದು ಸೋನಿಯಾ ಹೇಳಿದರು. ಕೇಂದ್ರವು ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಸಂಬಂಧಿತ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು  ಆರೋಪಿಸಿದರು.

ಆನ್ಲೈನ್ ಸಭೆಯಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋವಿಡ್ -19 ಭೀತಿಯಿಂದಾಗಿ, ಪರೀಕ್ಷೆಗಳನ್ನು ಮುಂದೂಡಲು ಒಗ್ಗಟ್ಟಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಸೂಚಿಸಿದರು.

“ಇದು ಎಲ್ಲಾ ರಾಜ್ಯ ಸರ್ಕಾರಗಳಿಗೆ ನನ್ನ ಕೋರಿಕೆಯಾಗಿರುತ್ತದೆ. ನಾವು ಇದನ್ನು ಒಟ್ಟಾಗಿ ಮಾಡೋಣ. ನಾವು ಸುಪ್ರೀಂ ಕೋರ್ಟ್‌ಗೆ ಹೋಗಿ, ಪರಿಸ್ಥಿತಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡುವವರೆಗೆ ಪರೀಕ್ಷೆಯನ್ನು ಮುಂದೂಡಲು ಕೇಳಿಕೊಳ್ಳೋಣ” ಎಂದು ಅವರು ಹೇಳಿದರು.

ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಕಳೆದ ಎರಡು ದಿನಗಳ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಎರಡು ಪತ್ರಗಳನ್ನೂ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ.

ಮಮತಾ ಬ್ಯಾನರ್ಜಿಯ ಕರೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬೆಂಬಲಿಸಿದರು.

1 COMMENT

LEAVE A REPLY

Please enter your comment!
Please enter your name here