ತಮ್ಮ ದಿವಂಗತ ತಾಯಿಯವರ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾದ ನಟ ಸೋನೂ ಸೂದ್

0
204
Tap to know MORE!

ಕೋವಿಡ್-೧೯ ಭೀತಿಯಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ಸಮಯದಲ್ಲಿ, ನಟ ಸೋನು ಸೂದ್ ಅವರು ಲಕ್ಷಾಂತರ ವಲಸೆ ಕಾರ್ಮಿಕರು ಮತ್ತು ಇತರ ಕೂಲಿ ಕಾರ್ಮಿಕರನ್ನು ತಲುಪಿಸಿ ಭಾರಿ ಪ್ರಶಂಸೆಗಳಿಸಿದ್ದರು. ಇದೀಗ ನಟನು, ಕಳೆದ ಎರಡು ದಿನಗಳಿಂದ ಅಗತ್ಯವಿರುವವರಿಗೆ ಪುಸ್ತಕಗಳು, ಪಠ್ಯದ ಸಲಕರಣೆಗಳು ಮತ್ತು ಇತರ ವಿಷಯಗಳಿಗೆ ಸಹಾಯ ಮಾಡುತ್ತಿದ್ದಾರೆ.

ಈಗ, ಜನರ ಸಹಾಯ ಮಾಡಲು ಮತ್ತೊಂದು ಯೋಜನೆಯನ್ನು ನಟ ಸೋನೂ ಸೂದ್ ಪ್ರಾರಂಭಿಸಿದ್ದಾರೆ. ತಮ್ಮ ದಿವಂಗತ ತಾಯಿ ಸರೋಜ್ ಸೂದ್ ಅವರ ಹೆಸರಿನಲ್ಲಿ, ವಿವಿಧ ಕೋರ್ಸ್‌ಗಳಲ್ಲಿ ಓದುತ್ತಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು : scholarships@sonusood.me

“ಕಳೆದ ಕೆಲವು ತಿಂಗಳುಗಳಲ್ಲಿ, ಬಡವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸಲು ಹೇಗೆ ಹೆಣಗಾಡುತ್ತಿದ್ದಾರೆಂದು ನಾನು ನೋಡಿದ್ದೇನೆ. ಕೆಲವರಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಫೋನ್‌ಗಳಿಲ್ಲ. ಇನ್ನೂ ಕೆಲವರಿಗೆ ಶಾಲೆಯ ಶುಲ್ಕವನ್ನು ಪಾವತಿಸಲು ಹಣವಿಲ್ಲ. ಆದ್ದರಿಂದ, ನನ್ನ ತಾಯಿ ಪ್ರೊಫೆಸರ್ ಸರೋಜ್ ಸೂದ್ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ನೀಡಲು ನಾನು ದೇಶಾದ್ಯಂತದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ.ಅವರು ಮೊಗಾ (ಪಂಜಾಬ್) ನಲ್ಲಿ ಉಚಿತವಾಗಿ ಬೋಧಿಸುತ್ತಿದ್ದರು. ಅವರು ತಮ್ಮ ಕೆಲಸವನ್ನು ಮುಂದೆ ತೆಗೆದುಕೊಳ್ಳುವಂತೆ ನನ್ನಲ್ಲಿ ಹೇಳಿದ್ದರು ಮತ್ತು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ನಟ ಸೋನೂ ಸೂದ್ ಹೇಳಿದರು.

“ವಾರ್ಷಿಕ ಆದಾಯವು 2 ಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅವರ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು ಎಂಬುದು ಒಂದೇ ಷರತ್ತು. ಅವರ ಎಲ್ಲಾ ವೆಚ್ಚಗಳು – ಕೋರ್ಸ್ ಶುಲ್ಕಗಳು, ಹಾಸ್ಟೆಲ್ ವಸತಿ ಮತ್ತು ಆಹಾರ – ಎಲ್ಲವೂ ಇರುತ್ತದೆ ನಮ್ಮಿಂದ ನೋಡಿಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ಬಂದಿರುವ ವರದಿಗಳ ಪ್ರಕಾರ, ವಿದ್ಯಾರ್ಥಿವೇತನವು ಮೆಡಿಸಿನ್, ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್ ಮತ್ತು ಆಟೊಮೇಷನ್, ಸೈಬರ್‌ಸೆಕ್ಯೂರಿಟಿ, ಡಾಟಾ ಸೈನ್ಸ್, ಫ್ಯಾಶನ್, ಜರ್ನಲಿಸಮ್ ಮತ್ತು ಬಿಸಿನೆಸ್ ಸ್ಟಡೀಸ್ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ.

LEAVE A REPLY

Please enter your comment!
Please enter your name here