CAA-NRC ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿ ಭಾರತೀಯರನ್ನು ಗಡಿಪಾರು ಮಾಡಿದ ಸೌದಿ ಅರೇಬಿಯಾ!

0
3358
Tap to know MORE!

ಸೌದಿ(ಡಿ.13): ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಜಾರಿಗೊಳಿಸಿರುವ ಎನ್‌ಆರ್‌ಸಿಯ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಹಲವಾರು ಅನಿವಾಸಿ ಭಾರತೀಯರನ್ನು (ಎನ್‌ಆರ್‌ಐ) ಗಡೀಪಾರು ಮಾಡಿದೆ ಎಂದು ಅರಬ್ ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ವರ್ಷ ಭಾರತದಲ್ಲಿ ನಡೆದ ಶಹೀನ್ ಬಾಗ್ ಪ್ರತಿಭಟನೆಗಳಿಂದ ಪ್ರೇರಿತರಾಗಿ, ಮುಖ್ಯವಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆ ಹಾಗೂ ಧರಣಿ ನಡೆಸಿದರು. ಜೆಡ್ಡಾದಲ್ಲಿ ವಾಸಿಸುವ ಹಲವಾರು ಭಾರತೀಯರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ, ಉದ್ದೇಶಿತ ನೋಂದಣಿ ಮಸೂದೆಯ ವಿರುದ್ಧ ಫಲಕಗಳನ್ನು ಹಿಡಿದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: “ಸುದ್ದಿ ಪತ್ರಿಕೆಗಳ ಪಿಡಿಎಫ್ ಹಾಗೂ ಯಾವುದೇ ಡಿಜಿಟಲ್ ಪ್ರತಿಯನ್ನು ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ!”

ಆದರೆ ಈ ಪ್ರತಿಭಟನೆಯು ಅನಿವಾಸಿ ಭಾರತೀಯರನ್ನು ತೊಂದರೆಗೆ ಸಿಲುಕಿಸಿದೆ. ಸೌದಿಯಲ್ಲಿ ಯಾವುದೇ ರೀತಿಯ ಸಭೆ ಮತ್ತು ಪ್ರತಿಭಟನೆಯು ನಿಷೇಧ. ಹಾಗಾಗಿ ಈ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಮತ್ತು ಭಾರತಕ್ಕೆ ಮರುಕಳಿಸಲಾಗಿದೆ ಎಂದು ವರದಿಯಾಗಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಧರಣಿ ಅಥವಾ ಕೂಟಗಳಿಗೆ ಅವಕಾಶವಿಲ್ಲ. ಆದರೆ ಪ್ರತಿಭಟನಾಕಾರರು, ಈ ಮೂಲ ನಿಯಮದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ತಮ್ಮ ಬೆಂಬಲವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅನೇಕರು ತೊಂದರೆಗೆ ಸಿಲುಕಿದ್ದರು.

LEAVE A REPLY

Please enter your comment!
Please enter your name here