“ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ…!” – ತುಳು ಭಾಷೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟ್ವೀಟ್!

0
194
Tap to know MORE!

ಮಂಗಳೂರು: ಶಾರ್ಜಾದಲ್ಲಿ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮಧ್ಯೆ ನಡೆದ ಐಪಿಎಲ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ನಿಕೋಲಸ್ ಪೂರನ್‌ರವರ ಅದ್ಭುತ ಫೀಲ್ಡಿಂಗ್ ಒಂದನ್ನು ಗುಣಗಾನ ಮಾಡುತ್ತಾ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್ ತುಳು ಭಾಷೆಯಲ್ಲಿ ಟ್ವೀಟ್ ಮಾಡಿದೆ.

ಪೂರನ್ ಫೀಲ್ಡಿಂಗ್‌ನ ಫೋಟೋ ಹಂಚಿಕೊಂಡು, “ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ…!,” ಎಂದು ಟ್ವೀಟ್ ಮಾಡಿದೆ.

ಇದನ್ನೂ ನೋಡಿ : ನಿಕೋಲಸ್ ಪೂರನ್‌ರ ಅದ್ಭುತ ಫೀಲ್ಡಿಂಗ್‌ನ ವೀಡಿಯೊ

ಶಾರ್ಜಾದ ಅಂಗಳದಲ್ಲಿ ಸಿಕ್ಸರ್, ಬೌಂಡರಿಗಳ ಮೇಲಾಟದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡನ್ನು ಮೇಲಕ್ಕೆ ನೆಗೆದು ಸಿಕ್ಸರ್ ತಡೆದ ನಿಕೋಲಸ್ ಪೂರನ್‌ರ ಸಾಹಸಿಕ ಫೀಲ್ಡಿಂಗ್‌ಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಕ್ರಿಕೆಟ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ, ‘ಇದು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಸೇವ್’ ಎಂದು ಟ್ವೀಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್, ‘ಶೇ… ಎಂಚಿನ ಫೀಲ್ಡಿಂಗ್ ಮಾರ‌್ರೆ’ (ಎಂಥಾ ಫೀಲ್ಡಿಂಗ್ ಮಾರಾಯರೇ) ಎಂದು ಬರೆದುಕೊಂಡಿದೆ. ಇದು ಎಲ್ಲ ಕಡೆ ವೈರಲ್ ಆಗಿದ್ದು, ಚಾನಲ್‌ನ ತುಳು ಭಾಷೆಯ ಅಭಿಮಾನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಪೂರನ್ ಫೀಲ್ಡಿಂಗ್ ನೋಡಿ ತಮ್ಮ ಮನಸ್ಸಿನಲ್ಲಿ ಆ ಕ್ಷಣಕ್ಕೆ ಬಂದ ಯೋಚನೆಯನ್ನೇ ಟ್ವೀಟ್ ಮಾಡಿದ್ದು, ಕರ್ನಾಟಕದ ಸ್ಥಳೀಯ ಭಾಷೆಗಳನ್ನು ಪ್ರಚುರಪಡಿಸುವ ಉದ್ದೇಶ ಎಂದು ಟ್ವೀಟ್ ಮಾಡಿರುವ ಸಂತೋಷ್ ನಾಯ್ಕ ತಿಳಿಸಿದ್ದಾರೆ.

‘ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುತ್ತದೆ. ಕರಾವಳಿ ಭಾಗದ ಭಾಷೆಯನ್ನೂ ಬಳಸಿ ಅಭಿಮಾನಿಗಳನ್ನು ತಲುಪುವ ಉದ್ದೇಶ ನಮ್ಮದು. ಆ ಕ್ಷಣದಲ್ಲಿ ಮನಸ್ಸಿಗೆ ಬಂದ ವಾಕ್ಯವನ್ನು ಅಲ್ಲಿ ಹಾಕಿದ್ದು ಎಲ್ಲ ಕಡೆ ವೈರಲ್ ಆಗಿರುವ ಬಗ್ಗೆ ಅಭಿಮಾನವಿದೆ’ ಎಂದು ಸ್ಟಾರ್ ಸ್ಪೋರ್ಟ್ಸ್ ಪಿಆರ್ ಟೀಮ್‌ನ ರೋಹನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here