ತೋಕೂರು : ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ

0
169
Tap to know MORE!

ತೋಕೂರು: ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು, ಹಳೆಯಂಗಡಿ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್, ಹಳೆಯಂಗಡಿ ಜಂಟಿ ಆಶ್ರಯದಲ್ಲಿ
ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ ರವಿವಾರ, ಬೆಳಿಗ್ಗೆ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.

ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಮಹಿಳೆಯರನ್ನು ದೈಹಿಕ ಹಾಗೂ ಮಾನಸಿಕವಾಗಿ ಸಬಲಗೊಳಿಸುವ ಪ್ರಯತ್ನಗಳನ್ನು ಮಾಡಬೇಕು. ಎಂದು ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ, ಮಂಗಳೂರು ಇದರ ವಿನೋದ್ ಕುಮಾರ್ ಸಸಿಹಿತ್ಲು ಮಾತನಾಡಿದರು.

ಇದನ್ನೂ ಓದಿ:  ಬಿಹಾರ ಮತದಾನೋತ್ತರ ಸಮೀಕ್ಷೆ – ಬಿಜೆಪಿಗೆ ಸೋಲು | ಮಹಾಘಟಬಂಧನ್‌ಗೆ ಮುನ್ನಡೆ!

ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಕಾರ್ಯದರ್ಶಿ ಲೋಕನಾಥ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆರ್ನ ಕ್ಲಿನಿಕ್, ಹಳೆಯಂಗಡಿ ಇದರ ಲ!ಡಾ !ನಂದಿನಿ ಅವರು ಸ್ತನ ಕ್ಯಾನ್ಸರ್ ನ ಕಾರಣಗಳು ಅದರ ನಿಯಂತ್ರಣ, ಚಿಕಿತ್ಸೆ ಹಾಗೂ ಗುಣದ ಬಗ್ಗೆ ಹಾಗೂ ಕ್ಯಾನ್ಸರ್ ವಿಷಯದಲ್ಲಿ ಎಚ್ಚರ ವಹಿಸಲು ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್ ಪರೀಕ್ಷೆ ಹಾಗೂ ಮಾಸಿಕ ಸ್ತನ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು

ಮುಖ್ಯ ಅತಿಥಿಯಾಗಿ ಆಗಮಿಸಿದ ಲ!ಯಾದವ್ ದೇವಾಡಿಗ ಅವರು ಇಂದು ಮಹಿಳೆಯರು ಮನೆಯಲ್ಲಿ ಹಾಗೂ ಹೊರಗಡೆ ವಿವಿಧ ಕೆಲಸಗಳಲ್ಲಿ ತೊಡಗಿರುತ್ತಾರೆ.ಈ ಕಾರಣದಿಂದಾಗಿ ಅವರ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದನ್ನು ಮರೆಯುತ್ತಾರೆ.ಈ ರೀತಿಯ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಹಿಳೆಯರು ಬಾಗವಹಿಸಬೇಕು ಎಂದು ಹೇಳಿದರು

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್,
ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರು ನಾರಾಯಣ ಜಿ. ಕೆ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಮಾಜಿ ಅಧ್ಯಕ್ಷರು ಮೋಹನ್ ದಾಸ್, ಮಾಜಿ ಪಂಚಾಯತ್ ಸದಸ್ಯರು ಸಂತೋಷ್ ಕುಮಾರ್, ಸಂಸ್ಥೆಯ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ವಾಣಿ ಮಹೇಶ್, ಜಂಟಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ಉಪಸ್ಥಿತರಿದ್ದರು

ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು ಸಂತೋಷ್ ದೇವಾಡಿಗ ಅತಿಥಿಗಳನ್ನು ಸ್ವಾಗತಿಸಿದರು. ಲಯನ್ಸ್ ಮತ್ತು ಲಿಯೋ ಕ್ಲಬ್, ಇದರ ಅಧ್ಯಕ್ಷರು ಶರತ್, ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here