ಸ್ನೇಹ ರಾಣಾ – ತನಿಯಾ ಭಾಟಿಯಾ ಸಾಹಸ : ಇಂಗ್ಲೆಂಡ್ ವಿರುದ್ಧದ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ ಭಾರತ

0
184
Tap to know MORE!

ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿರುವ ಸ್ನೇಹ ರಾಣಾ ಮತ್ತು ತಾನಿಯಾ ಭಾಟಿಯಾ ಅವರು ಸಾಹಸದಿಂದಾಗಿ, ಇಂಗ್ಲೆಂಡ್ ವಿರುದ್ಧದ ಏಕೈಕ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಲು ಭಾರತವು ಯಶಸ್ವಿಯಾಗಿದೆ. ಒಂಬತ್ತನೇ ವಿಕೆಟ್‌ಗೆ ಅವರಿಬ್ಬರೂ ಅಜೇಯ 108 ರನ್ ಗಳ ಜೊತೆಯಾಟ ಆಡಿ, ಏಕೈಕ ಪಂದ್ಯವನ್ನು ಸ್ಮರಣೀಯಗೊಳಿಸಿದರು.

ಅಗ್ರಕ್ರಮಾಂಕದಲ್ಲಿ ದೀಪ್ತಿ ಶರ್ಮಾ 168 ಎಸೆತಗಳಲ್ಲಿ 54 ರನ್ ಗಳಿಸಿ ಇಂಗ್ಲೆಂಡ್‌ಗೆ ಪ್ರತಿರೋಧವನ್ನು ಕೊಟ್ಟರೆ, ನಂತರದಲ್ಲಿ ರಾಣಾ 154 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ಮೂಡಿದರು. ಅದಲ್ಲದೆ, ಶಿಖಾ ಪಾಂಡೆ ಮತ್ತು ಭಾಟಿಯಾ ನಡುವಿನ 88 ಎಸೆತಗಳಲ್ಲಿ 44 ರನ್‌ಗಳ ಜೊತೆಯಾಟವೂ ಮುಖ್ಯ ಪಾತ್ರ ವಹಿಸಿತ್ತು.

ಹೊಸ ಭಾಂದವ್ಯ ರೂಪಿಸುವ ಆಟ ಕ್ರಿಕೆಟ್

ತನ್ನ ಆಫ್ ಸ್ಪಿನ್ ಬೌಲಿಂಗ್ ಮೂಲಕ, ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದ 27 ವರ್ಷದ ರಾಣಾ, ಈ ಮೂಲಕ ರಾಷ್ಟ್ರೀಯ ತಂಡಕ್ಕೆ ಭರ್ಜರಿಯಾಗಿ ಪುನರಾಗಮನವನ್ನು ಮಾಡಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಭಾರತದ 121.2 ಓವರ್‌ಗಳ ನಂತರ, ಪಂದ್ಯ ಅಂತ್ಯಗೊಳ್ಳಲು ಕೇವ 12 ಓವರ್‌ಗಳು ಬಾಕಿಯಿದ್ದಾಗ ಉಭಯ ತಂಡಗಳು ಡ್ರಾಗೆ ಸಮ್ಮತಿ ಸೂಚಿಸಿದವು. ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 231 ರನ್‌ಗಳಿಗೆ ಆಲೌಟಾದ ನಂತರ ಭಾರತಕ್ಕೆ ಇಂಗ್ಲೆಂಡ್ ಫಾಲೋ ಆನ್ ಹೇರಿತ್ತು. ಆಟಗಾರ್ತಿಯರ ಛಲದ ಆಟದಿಂದ ಭಾರತವು ಸೋಲಿನಿಂದ ಪಾರಾಯಿತು.

 

LEAVE A REPLY

Please enter your comment!
Please enter your name here