ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾಗೆ ಕೊರೋನಾ!

0
178
Tap to know MORE!

ಕೊರೋನಾ ವೈರಸ್ ಇಡಿ ವಿಶ್ವವನ್ನು ಕಾಡುತ್ತಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ ರಣಕೇಕೆ ಹೆಚ್ಚುತ್ತಿದೆ. ರಾಜಕಾರಣಿಗಳು, ಸಿನಿಮಾ ಮಂದಿ ಸೇರಿ ಎಲ್ಲರೂ ಕೊರೋನಾ ಸೋಂಕನ್ನು ತಗುಲಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಕೊರೋನಾ ವಕ್ಕರಿಸಿತ್ತು. ಇದೀಗ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಈ ಬಗ್ಗೆ ಖುದ್ದು ಧ್ರುವ ಸರ್ಜಾರವರು ಟ್ವೀಟ್ ಮಾಡಿದ್ದು, ತಮಗೆ ಕೊರೋನಾ ಸೋಂಕು ಇರುವುದನ್ನು ಖಚಿತಪಡಿಸಿದ್ದಾರೆ. “ಕೊರೋನಾ ಲಕ್ಷಣಗಳು ಇದ್ದಿದ್ದರಿಂದ ನಾವಿಬ್ಬರೂ ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಫಲಿತಾಂಶ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಬೇಗ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮ ಜೊತೆ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್ ಮಾಡಿಸಿ ಮನೆಯಲ್ಲೇ ಇರಿ” ಎಂದು ಧ್ರುವ ಕೋರಿದ್ದಾರೆ.

LEAVE A REPLY

Please enter your comment!
Please enter your name here