ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗ, ಪಕ್ಷಿಕೆರೆ ಹಾಗೂ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ, ಪಕ್ಷಿಕೆರೆ ಇವರ ಆಶ್ರಯದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.
ಈ ಬಳಗದ ಪ್ರಮುಖ ಮೂರು ಉದ್ದೇಶಗಳಲ್ಲಿ ಒಂದಾದ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆಯಿಂದ ಹರಿಪಾದದ ವರೆಗಿನ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಹುಲ್ಲು, ಕಸಗಳನ್ನು ತೆಗೆದು ರಸ್ತೆ ರಿಪೇರಿ ಮಾಡುವ ಮೂಲಕ, ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ವಾಲ್ಟರ್ ಡಿಸೋಜ, ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್(ರಿ) ಹರಿಪಾದ ಇದರ ಗೌರವಾಧ್ಯಕ್ಷರಾದ ಶ್ರೀರಾಮದಾಸ್ ಶೆಟ್ಟಿ ಹಾಗೂ
ಅಧ್ಯಕ್ಷರಾದ ಶ್ರೀಚೇತನ್ ಹರಿಪಾದ, ಕಾರ್ಯದರ್ಶಿ ಶ್ರೀಪವನ್ ಕುಮಾರ್ ಮತ್ತು ತಂಡದ ಸರ್ವ ಸದಸ್ಯರು ಭಾಗವಹಿಸಿದರು.