ಹಳೆಯಂಗಡಿ : “ಸ್ವಚ್ಛೋತ್ಸವ – ನಿತ್ಯೋತ್ಸವ” ಸ್ವಚ್ಛತಾ ಅಭಿಯಾನ

0
294
Tap to know MORE!

ಹಳೆಯಂಗಡಿ: ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯ ಅಂಗವಾಗಿ “ಸ್ವಚ್ಛೋತ್ಸವ – ನಿತ್ಯೋತ್ಸವ” ಸ್ವಚ್ಚತೆಯ ಕಡೆ ನಮ್ಮ ನಡೆ – ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಜಂಟಿ ಸಂಸ್ಥೆಗಳ ಆಶ್ರಯದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ನೇತೃತ್ವದಲ್ಲಿ ಮಾತಾ ಅಮೃತಾನಂದಮಯಿ ಮಠ, ಅಮಲಾ ಭಾರತ ಅಭಿಯಾನ ಬೋಳೂರು ಮಂಗಳೂರು, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ, ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ, ಜಿಲ್ಲಾ ಪ್ರಶಸ್ತಿ ವಿಜೇತ, ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ಇವರ ಸಹಕಾರದಲ್ಲಿ ಗ್ರಾಮ ಪಂಚಾಯತ್ ಹಳೆಯಂಗಡಿ ಇದರ “ಸ್ವಚ್ಚೋತ್ಸವ – ನಿತ್ಯೋತ್ಸವ” ಎಂಬ ಶೀರ್ಷಿಕೆಯಲ್ಲಿ ಅಭಿಯಾನ ನಡೆಯಿತು.

ಇದನ್ನೂ ನೋಡಿ: ಪಾವಂಜೆ : ಕೃಷಿಕರ ಅಂಗಳದಲ್ಲಿ ನಡೆಯಿತು ಕೃಷಿ ಮಾಹಿತಿ ಕಾರ್ಯಾಗಾರ

ಕಾರ್ಯಕ್ರಮವು ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಹಿಂಬದಿಯ ಸಾರ್ವಜನಿಕ ಬಳಕೆಯ ಕಾಲು ದಾರಿಯಲ್ಲಿ ಜರುಗಿತು. ವಿಪರೀತ ಮಳೆಯ ಪರಿಣಾಮ ಕಾಲು ದಾರಿಯ ಸುತ್ತ ಮುತ್ತ ಬೆಳೆದು ನಿಂತ ಹುಲ್ಲು, ಗಿಡ ಪೋದರನ್ನು ಕಡಿದು ಸ್ವಚ್ಚಗೊಳಿಸಿ ಸಾರ್ವಜನಿಕರಿಗೆ ಕಾಲು ದಾರಿಯ ಬಳಕೆಗೆ ಅನುಕೂಲ ಆಗುವಂತೆ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳೂರು, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರಿ ಪೂರ್ಣಿಮಾ ಇವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಯತೀಶ್ ಕೋಟ್ಯಾನ್, ಸಲಹಾ ಸಮಿತಿಯ ಅಧ್ಯಕ್ಷರಾದ ಸದಾಶಿವ ಅಂಚನ್ ಚಿಲಿಂಬಿ,ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕರ ಆರ್ ಅಮೀನ್, ಯುವಕ ಮಂಡಲದ ಪ್ರದಾನ ಕಾರ್ಯದರ್ಶಿ ಇಂದುಧರ ಕಿಣಿ, ಯುವತಿ ಮಂಡಲದ ಅಧ್ಯಕ್ಷರಾದ ದಿವ್ಯಶ್ರೀ ರಮೇಶ್ ಕೋಟ್ಯಾನ್ , ಮಹಿಳಾ ಮಂಡಲದ ಅಧ್ಯಕ್ಷರಾದ ರೇಷ್ಮಾ ಅಶ್ರಫ್, ಅಮಲಾ ಭಾರತ ಅಭಿಯಾನದ ಮೋಹನ್ ಬಂಗೇರ ಮತ್ತು ಜಂಟಿ ಸಂಸ್ಥೆಗಳ ಇತರ ಸದಸ್ಯರು ಉಪಸ್ಥಿತರಿದ್ದು, ಸಹಕರಿಸಿದರು

LEAVE A REPLY

Please enter your comment!
Please enter your name here