ದೆಹಲಿ : ಜೆಎನ್‌ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

0
82
Tap to know MORE!

ನವದೆಹಲಿ(ನ.12): ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಂಡಿದೆ. ಪರ ವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿವೇಕಾನಂದ ಪ್ರತಿಮೆ ಅನಾವರಣ ಮಾಡಲಾಗಿದೆ.

ವರ್ಚುವಲ್ ಕಾರ್ಯಕ್ರಮದ ಮೂಲಕ ಮೋದಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಲಾಗಿದೆ. ಧೈರ್ಯ ಹಾಗೂ ಸಹಾನುಭೂತಿಯನ್ನು ತುಂಬವು ಪ್ರತಿಮೆಯಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಈ ಸ್ವಾರ್ಥರಹಿತ ಹೋರಾಟಗಾರ್ತಿಯನ್ನು ಮರೆತೇ ಬಿಟ್ಟೆವೆ?!

ವಸಾಹತುಶಾಹಿ ಸಮಯದಲ್ಲಿ ನಾವು ತುಳಿತಕ್ಕೊಳಗಾದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಮಿಚಿಗನ್ ವಿಶ್ವವಿದ್ಯಾನಿಲಯಲ್ಲಿ ಮಹತ್ವದ ಭಾಷಣ ಮಾಡಿದರು. ಈ ವೇಳೆ ಈ ಶತಮಾನ ನಿಮ್ಮದಾಗಿದ್ದರೆ, ಮುಂದಿನ ಶತಮಾನ ಭಾರತಕ್ಕೆ ಸೇರಿದೆ ಎಂದಿದ್ದರು. ಇದೀಗ ವಿವೇಕಾನಂದರ ದೃಷ್ಟಿಕೋನವನ್ನು ಸಾಕರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Go Back Modi ಘೋಷಣೆ!

ಮೋದಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ವಿರೋಧಗಳು ವ್ಯಕ್ತವಾಗಿತ್ತು. ಗೋ ಬ್ಯಾಕ್ ಮೋದಿ ಎಂಬು ಘೋಷಣೆಗಳು ಮೊಳಗಿತ್ತು. ಆದರೆ ಪರ ವಿರೋಧದ ನಡುವೆ ಸ್ವಾಮಿ ವಿವೇಕಾನಂದರ ಪ್ರತಿಮೆ JNU ಕ್ಯಾಂಪಸ್‌ನಲ್ಲಿ ಅನಾವರಣಗೊಂಡಿದೆ.

LEAVE A REPLY

Please enter your comment!
Please enter your name here