ಸ್ವಾರ್ಥ ಪ್ರಪಂಚದ ಕಟು ಸತ್ಯ

0
197
Tap to know MORE!

ಬಾಯಾರಿ ಬಸವಳಿದಾಗ ತೊಟ್ಟು ನೀರನ್ನೂ ಹುಯ್ಯದವರು, ಸತ್ತಾಗ ನಾ ಮುಂದು ತಾ ಮುಂದೆಂದೂ ಹೆಗಲು ಕೊಡಲು ಬಂದರೇನು ಫಲ?

ಹಸಿದಾಗ ತುತ್ತು ಕೂಳಿಗೂ ಬಿರಿಯಾಗಿ ಕೂತಾಗ ಅನ್ನವ ನೀಡದೇ , ಅಗಲಿದಾಗ ತಿಥಿ ಕಾರ್ಯಕ್ಕೆ ಭಕ್ಷ್ಯ ಭೋಜನ ಮಾಡಿಟ್ಟರೇನು ಫಲ?

ಗೊತ್ತಿದ್ದು ಮಾಡಿದ ಪಾಪ ಕಾರ್ಯಕ್ಕೆ ಚಿಂತಿಸಿ ಕೂತರೆ ಕಾಲ ಮರಳುವುದಿಲ್ಲ,
ಇದ್ದವರನ್ನು ಇದ್ದಾಗಲೇ ಪ್ರೀತಿಸಿ ಸಮಯ ಸಿಕ್ಕಾಗಲೆಲ್ಲಾ ಖುಷಿ ಅನುಭವಿಸಿ

ಸಿಕ್ಕ ಅವಕಾಶವ ಬಳಸಿಕೊಳ್ಳದೇ,
ಇನ್ನೊಂದು ಅವಕಾಶಕ್ಕೆ ಕಾಯುವವ, ಇನ್ನೊಬ್ಬರ ಏಳಿಗೆಯ ಕಂಡು ಉರಿಯುವವ ಇದ್ದಾದರೂ ಏನು ಸಾಧಿಸಿಯಾನು?

ಸತ್ಯ ಮಾರ್ಗ ಅನುಸರಿಸುವವರಿಗೆ ಅಸತ್ಯ ಎಂದಿಗೂ ಅಡ್ಡಿಯಾಗಿಯೇ ಇರುತ್ತದೆ, ಧರ್ಮದ ದಾರಿಯವನಿಗೆ ಅಧರ್ಮದ ತೊಡಕು,ಆದರೂ ಕೊನೆಗೆ ಗೆಲುವು ಸತ್ಯ ಮತ್ತು ಧರ್ಮದ ಹಕ್ಕು!!!

ಧನ್ಯಶ್ರೀ ಕೆ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here