ತೋಕೂರು: ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ಮತ್ತು ಮಾಹಿತಿ ಶಿಬಿರ

0
181
Tap to know MORE!

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು ಹಳೆಯಂಗಡಿ ಇದರ ನೇತೃತ್ವದಲ್ಲಿ ಸ್ವ ಉದ್ಯೋಗ ತರಬೇತಿ ಮತ್ತು ಮಾಹಿತಿ ಶಿಬಿರವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು

ಲಯನ್ಸ್ & ಲಿಯೋ ಕ್ಲಬ್, ಕದ್ರಿಹಿಲ್ಸ್, ಮಂಗಳೂರು ಹಾಗೂ ವಿನಯ ವ್ಯವಸಾಯ ಸೇವಾ ಸಹಕಾರಿ ಸಂಘ, ಬೆಳ್ಳಾಯರು, ಕೊಲ್ನಾಡು ಇದರ ಸಂಯುಕ್ತ ಆಶ್ರಯದಲ್ಲಿ, ಎರಡು ದಿನಗಳ ಕಾಲ ಮಾಸ್ಕ್, ಕ್ಯಾಂಡಲ್, ಸಾಬೂನು, ಬ್ಯಾಗ್ ತಯಾರಿಸುವ ಬಗ್ಗೆ 2 ದಿನಗಳ ಕಾಲ ಈ ಶಿಬಿರ ನಡೆಯಿತು.

ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಖಲತಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

ಪ್ರಥಮ ದಿನದ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಶ್ರೀಮತಿ ಹರಿಣಾ ಜೆ ರಾವ್ ಮತ್ತು ಸಮಿತಿ ಸದಸ್ಯೆ ಶ್ರೀಮತಿ ಶಾಂತಿ ಇವರು ಮಾಸ್ಕ್ ಹಾಗೂ ಬ್ಯಾಗ್ ತಯಾರಿಸುವ ಮಾಹಿತಿ ನೀಡಿದರು.

ಭಾರತ ಸರಕಾರ ದತ್ತೋಪಂತ ಥೆಂಗಡಿ, ರಾಷ್ಟ್ರೀಯ ಶಿಕ್ಷಣ ಅಭಿವೃದ್ದಿ ಮಂಡಳಿಯ ಶಿಕ್ಷಣಾಧಿಕಾರಿ ಶ್ರೀ ಶಿವಬೋರಯ್ಯ ಇವರು ಸರಕಾರದಿಂದ ಸಿಗುವ ಸವಲತ್ತುಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ, ಸುರಕ್ಷಾ ವಿಮಾ ಯೋಜನೆ, ನ್ಯಾಶನಲ್ ಪೆನ್ಶನ್, ಸ್ಕೀಮ್(NPS)ನ ಬಗ್ಗೆ ಮಾಹಿತಿ ಮತ್ತು ಅದರ ಪ್ರಯೋಜನಗಳು ಹಾಗೂ ಪ್ರಸ್ತುತ ಇರುವ ಸರಕಾರದ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿಗಳನ್ನು ನೀಡಿದರು.

ಮಾಹಿತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಪಡುಪಣಂಬೂರು ಗ್ರಾಮ ಪಂಚಾಯತ್ ಇದರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನಿತಾ ಕ್ಯಾಥರಿನ್ ಇವರು ಮಾತನಾಡಿ ಮಹಿಳೆಯರು, ಸ್ವ- ಉದ್ಯೋಗದತ್ತ ಮುಖ ಮಾಡಿದಲ್ಲಿ ಮಹಿಳಾ ಶಕ್ತಿ ಹೆಚ್ಚಿಸಿದಂತಾಗುತ್ತದೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ವಿನೋದ್ ಕುಮಾರ್ ಬೊಳ್ಳೂರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಸ್ವ ಉದ್ಯೋಗದ ಮಾಹಿತಿ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಳ್ಳಾಯರು ವಿನಯ ವ್ಯವಸಾಯ ಸೇವಾ ಸಹಕಾರಿ ಸಂಘದ ಸಲಹೆಗಾರರಾಗಿರುವ ಡಾ|ಅಣ್ಣಯ್ಯ ಕುಲಾಲ್ ಇವರು ಮಾತನಾಡಿ, ಮಹಿಳೆಯರು ತಪ್ಪು ದಾರಿಗೆ ಇಳಿಯದೇ, ಸ್ವ-ಉದ್ಯೋಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಿರಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಹಿಳಾ ವಿಭಾಗದ ಜಿಲ್ಲಾದ್ಯಕ್ಷೆ ಶ್ರೀಮತಿ ಹರಿಣಾ.ಜೆ.ರಾವ್, ಉದ್ಯಮಿ ತನು ಇಲೆಕ್ಟ್ರಿಕಲ್ಸ್ ಕಿನ್ನಿಗೋಳಿ ಇದರ ಮಾಲಕರು ಮತ್ತು ಸಂಸ್ಥೆಯ ಮಾರ್ಗದರ್ಶಕರು ಶ್ರೀ ಅಜಿತ್ ಕುಮಾರ್ ಕೆರೆಕಾಡು ಸಂಸ್ಥೆಯ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ ಕೆ ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ,ಮಹಿಳಾ ಸಮಿತಿ ಕಾರ್ಯಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್ ಉಪಸ್ಥಿತರಿದ್ದರು.

ಮಾಹಿತಿ ಶಿಬಿರದಲ್ಲಿ ಬೇರೆ ಬೇರೆ ಗ್ರಾಮದ ಮಹಿಳೆಯರು ಮತ್ತು ಸ್ಪೋರ್ಟ್ಸ್ ಕ್ಲಬ್ ನ ಮಹಿಳಾ ಸದಸ್ಯೆಯರು ಒಟ್ಟು 32 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಸಂಸ್ಥೆಯ ಮಹಿಳಾ ಸದಸ್ಯೆ ಮತ್ತು ಆಶಾ ಕಾರ್ಯಕರ್ತೆ ಶ್ರೀಮತಿ ಯಶೋದ ಜಯಂತ್ ದೇವಾಡಿಗ ಇವರು ಮಾಹಿತಿ ಶಿಬಿರದ ಅನಿಸಿಕೆಗಳನ್ನು ಹಂಚಿ ಕೊಂಡರು.

ಸಂಸ್ಥೆಯ ಮಹಿಳಾ ಸದಸ್ಯೆಯರಾದ ಶ್ರೀಮತಿ ಜ್ಯೋತಿ ಕುಲಾಲ್,ಶ್ರೀಮತಿ ಶೋಭಾ ವರುಣ್ ಅಂಚನ್, ಶ್ರೀಮತಿ ಗೀತಾ ಸುರೇಶ್ ದೇವಾಡಿಗ ಪ್ರಾರ್ಥನೆ ಹಾಡಿದರು.

ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ ಸ್ವಾಗತಿಸಿದರು. ವಿನಯ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಲಯನ್ಸ್ & ಲಿಯೋ ಕ್ಲಬ್ ಕದ್ರಿ ಹಿಲ್ಸ್ ನ ಶ್ರೀ ಸಂತೋಷ್ ಶೆಟ್ಟಿ ವಂದಾನಾರ್ಪಣೆ ಮಾಡಿದರು.

ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ & ಲಿಯೋ ಕ್ಲಬ್ ಕದ್ರಿ ಹಿಲ್ಸ್, ಮಂಗಳೂರು ಇದರ ಪದಾಧಿಕಾರಿಗಳು, ವಿನಯ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳ್ಳಾಯರು, ಕೊಲ್ನಾಡು ಇದರ ಸದಸ್ಯರು ಶ್ರೀ ಚಂದ್ರಹಾಸ್ ಮತ್ತು ಪಧಾದಿಕಾರಿಗಳು,ಸ್ಪೋರ್ಟ್ಸ್ ಕ್ಲಬ್ ಮಾರ್ಗದರ್ಶಕರು ಶ್ರೀ ನರೇಂದ್ರ ಕೆರೆಕಾಡು, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ, ಸಂಸ್ಥೆಯ ಆರೋಗ್ಯ ನಿಧಿ ಕಾರ್ಯದರ್ಶಿ ಮತ್ತು ಪಡುಪಣಂಬೂರು ವ್ಯವಸಾಯಿಕ ಬ್ಯಾಂಕ್ ನ ನಿರ್ದೇಶಕರು ಶ್ರೀ ಮುಖೇಶ್ ಸುವರ್ಣ, ಲೆಕ್ಕ ಪರಿಶೋದಕರು ಶ್ರೀ ಸುಭಾಷ್ ಅಮೀನ್ ಮತ್ತು ಸದಸ್ಯರು,ಸದಸ್ಯೆಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here