ಮಂಗಳೂರು, ನ 8: ರಸ್ತೆ ಕಾಂಕ್ರೀಟೀಕರಣ ಮತ್ತು ಒಳಚರಂಡಿ ಕೆಲಸದಿಂದಾಗಿ ಹಂಪನಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 8 ರಿಂದ ಜನವರಿ 6 (2021) ರವರೆಗೆ ಸಂಚಾರ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
- ಹಂಪನಕಟ್ಟೆಯಿಂದ ನವಭಾರತ ವೃತ್ತದವರೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ
- ನವಭಾರತ ವೃತ್ತದಿಂದ ಹಂಪನಕಟ್ಟೆವರೆಗಿನ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧ
- ಹಂಪನಕಟ್ಟೆಯಿಂದ ಲೈಟ್ ಹೌಸ್ ಹಿಲ್ ಮತ್ತು ಫಳ್ನೀರ್ ಕಡೆಗೆ ಸಾಗುವ ಎಲ್ಲಾ ವಾಹನಗಳು ಕೆಎಸ್ ರಾವ್ ರಸ್ತೆ ಅಥವಾ ಅಂಬೇಡ್ಕರ್ ವೃತ್ತದ ಮೂಲಕ ಪಿವಿಎಸ್ ಗೆ ಹೋಗುವ ಮಾರ್ಗವನ್ನು ತೆಗೆದುಕೊಳ್ಳಬೇಕು.
- ಅದೇ ರೀತಿ, ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಕಡೆಗೆ ಬರುವ ಎಲ್ಲಾ ವಾಹನಗಳು ಬಲ್ಮಠ ರಸ್ತೆಯ ಅರವಿಂದ್ ಮೋಟಾರ್ಸ್ ಶೋ ರೂಂ ಮುಂದೆ ಮಿಲಾಗ್ರೀಸ್ ಕ್ರಾಸ್ ರಸ್ತೆಯನ್ನು ಬಳಸಿ ಫಳ್ನೀರ್ ರಸ್ತೆ ಪ್ರವೇಶಿಸಬೇಕು. ಅಲ್ಲಿಂದ ಅವರು ವೆನ್ಲಾಕ್ ಆಸ್ಪತ್ರೆ ಅಂಡರ್ಪಾಸ್ – ರೈಲ್ವೆ ಸ್ಟೇಷನ್ ರಸ್ತೆ – ಯು ಪಿ ಮಲ್ಯ ರಸ್ತೆ – ತಾಲ್ಲೂಕು ಪಂಚಾಯತ್ ಕಚೇರಿಯ ಪಕ್ಕದಲ್ಲಿ ಹೋಗಿ ಎ ಬಿ ಶೆಟ್ಟಿ ಸರ್ಕಲ್ ಕಡೆಗೆ ಹೋಗಬೇಕು.
- ರೈಲ್ವೆ ನಿಲ್ದಾಣದಿಂದ ವೆನ್ಲಾಕ್ ಆಸ್ಪತ್ರೆ ಅಂಡರ್ಪಾಸ್ ಮೂಲಕ ಹಂಪನಕಟ್ಟೆ ಜಂಕ್ಷನ್ ಕಡೆಗೆ ಎಲ್ಲಾ ವಾಹನ ಸಂಚಾರ ನಿಷೇಧ
- ಮಿಲಾಗ್ರೀಸ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ನಿಲುಗಡೆ ನಿಷೇಧ
- ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಹಿಲ್ ವರೆಗೆ ದ್ವಿಮುಖ ಸಂಚಾರಕ್ಕೆ ಅವಕಾಶ
- ಹೀಗಿದ್ದರೂ, ಈ ನಿರ್ಬಂಧಗಳು ತುರ್ತು ಸೇವೆ ಮತ್ತು ಪೊಲೀಸ್ ವಾಹನಗಳಿಗೆ ಅನ್ವಯಿಸುವುದಿಲ್ಲ.