ಹತಾಶರಾಗದಿರಿ…

0
241
Tap to know MORE!

ಹತಾಶರಾಗದಿರಿ ನನ್ನ ಗೆಳೆಯ-ಗೆಳೆತಿಯರೇ
ಒಗ್ಗಟ್ಟಾಗಿ ಕೊರೋನಾ ಬಡಿದೋಡಿಸೋಣ
ನಮ್ಮನ್ನು ಆವರಿಸುವ ಮೊದಲು,
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳೋಣ

ಕುದಿಯಾರಿದ ನೀರು ಕುಡಿಯೋಣ
ಪೌಷ್ಠಿಕ ಆಹಾರ ಸೇವಿಸೋಣ
ದೇಹವೆಂಬ ದೇಗುಲವ ಶುಚಿಯಾಗಿರಿಸೋಣ
ಆರೋಗ್ಯದ ಬಗ್ಗೆ ಗಮನಹರಿಸೋಣ

ಕುಟುಂಬದ ಜೊತೆ ಸಮಯ ಕಳೆಯೋಣ
ಎಲ್ಲರೂ ಒಟ್ಟಾಗಿ ಮತ್ತೆ ನಗೋಣ
ಕೊರೋನಾದ ಚಿಂತೆ ಬಿಟ್ಟುಬಿಡೋಣ
ನಮ್ಮನ್ನು ಆವರಿಸದಂತೆ ಜಾಗ್ರತೆವಹಿಸೋಣ.

ಮಾಸ್ಕ್ ಕಡ್ಡಾಯವಾಗಿ ಧರಿಸೋಣ
ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ
ಕೈಗಳನ್ನು ತೊಳೆದು ಸ್ವಚ್ಛವಾಗಿಡೋಣ
ಸ್ಯಾನಿಟೈಸರ್ ತಪ್ಪದೇ ಬಳಸೋಣ

ಸುತ್ತಮುತ್ತಲ ಜನರ ಬಗ್ಗೆ ಗಮನಹರಿಸೋಣ
ನಮ್ಮಂತೆ ಇತರರು ಎಂದು ಭಾವಿಸೋಣ
ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ
ಕೆಡುಗಾಲದಲ್ಲಿ ಮಾನವೀಯತೆ ಮೆರೆಯೋಣ

ದೇಶದಿಂದ ಕೊರೋನಾ ಬಡಿದೋಡಿಸೋಣ
ಕೊರೋನಾ ಸಿಪಾಯಿಗಳಿಗೆ ಸಹಕರಿಸೋಣ
ಸರ್ಕಾರದ ನಿಯಮಗಳಿಗೆ ಬದ್ದರಾಗೋಣ
ಆರೋಗ್ಯವಂತ ಸಮಾಜ ನಿರ್ಮಿಸೋಣ

ಹತಾಶರಾಗದಿರಿ ನನ್ನ ಗೆಳೆಯ-ಗೆಳೆತಿಯರೇ….

ಪ್ರಮೀಳಾ
ದ್ವಿತೀಯ ಬಿ. ಎ ಪತ್ರಿಕೋದ್ಯಮ,
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.

LEAVE A REPLY

Please enter your comment!
Please enter your name here